ಹುಬ್ಬಳ್ಳಿ : ಕುಸುಗಲ್ಲ ಮತ್ತು ಹೆಬಸೂರ ನಿಲ್ದಾಣಗಳ ಮಧ್ಯೆ ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಸೊಲ್ಲಾಪುರ - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ಆ. 2, 4, 6, 8, 10, 12 ಮತ್ತು 14ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಲುಗಡೆಗೊಳ್ಳಲಿದೆ.
ಡೆಮು ರೖಲುಗಳ ಸಂಚಾರ ರದ್ದು : ಕಾಲೆಮ್ ಮತ್ತು ಸ್ಯಾನ್ವೊರ್ಡೆಮ್ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 208ರಲ್ಲಿ ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಆ. 22 ರಂದು
ವಾಸ್ಕೋ- ಕುಲೆಮ್ ಡೆಮು ಸ್ಪೇಷಲ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.