ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇಂದು, ನಾಳೆ

ಎಂ.ರವಿ

ಮದ್ದೂರು: ಕೆ.ಎಂ.ದೊಡ್ಡಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಮಾರ್ಗಗಳಲ್ಲಿ ಕೆ.ಎಂ.ದೊಡ್ಡಿ, ಮುಟ್ಟನಹಳ್ಳಿ, ಯಲಾದಹಳ್ಳಿ, ತೊರೆಬೊಮ್ಮನಹಳ್ಳಿ ಎನ್.ಜೆ.ವೈ.ಫೀಡರ್‌ಗಳ ವ್ಯಾಪ್ತಿಯಲ್ಲಿ ಸೆ.4 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ.

ಅಲ್ಲದೆ ಮದ್ದೂರು ಪಟ್ಟಣದ ಉಪವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-1 ರ ಗ್ರಾಮೀಣ ಶಾಖಾ ವ್ಯಾಪ್ತಿಯ ಗುರುದೇವರಹಳ್ಳಿ ಮಾರ್ಗದಲ್ಲಿ ತುರ್ತು ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಚನ್ನಸಂದ್ರ ಗ್ರಾಮದಲ್ಲಿ ಸೆ.3 ರಿಂದ 5ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬೋರಾಪುರ, ಗೊರವನಹಳ್ಳಿ, ಉಪ್ಪಿನಕೆರೆ, ಹುಲಿಗೆರೆಪುರ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.