ಮದ್ದೂರು: 66/11 ಕೆವಿ ಕೆಸ್ತೂರು ಹಾಗೂ ದುಂಡನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಸಂಬಂಧಪಟ್ಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 66/11 ಕೆವಿ ಲೈನ್‌ನ ಮಾರ್ಗಗಳು ನ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಲಿನ ಕೆಸ್ತೂರು/ದುಂಡನಹಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಟ್ಟ ಮಲ್ಲನಕುಪ್ಪೆ, ದುಂಡನಹಳ್ಳಿ, ಕೆಸ್ತೂರು, ತೊರೆಶೆಟ್ಟಿಹಳ್ಳಿ, ಆತಗೂರು, ಕದಲೂರು, ಅಡಗನಹಳ್ಳಿ, ಹೂತಗೆರೆ ಹಾಗೂ ಹೆಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.