ರಾಯಚೂರು: ನಗರಕ್ಕೆ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ ಮಂಗಳವಾರ ಸೋರಿಕೆಯಿಂದಾಗಿ ಎರಡು ದಿನಗಳ ಕಾಲ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದ ಹೊರವಲಯದ ವಡ್ಲೂರು ಕ್ರಾಸ್ ಹತ್ತಿರ 100 ಎಂಎಂ ವ್ಯಾಸದ ಮುಖ್ಯ ಪೈಪ್ ನೀರಿನ ಒತ್ತಡದಿಂದ ಒಡೆದು ನೀರು ಎತ್ತರಕ್ಕೆ ಚಿಮ್ಮುತ್ತಿದ್ದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿರುವುದರಿಂದ ನೀರು ಸರಬರಾಜು ನಿಲ್ಲಿಸಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಇದರಿಂದಾಗಿ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವ ಬಡಾವಣೆಗಳಿಗೆ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.