ಆನಂದಪುರ ಸಮೀಪದ ಯಡೇಹಳ್ಳಿಯ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವರ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. 
ಜಿಲ್ಲೆ

ವರಸಿದ್ಧಿವಿನಾಯಕ ಬ್ರಹ್ಮರಥೋತ್ಸವ ಸಂಪನ್ನ

ಆನಂದಪುರ: ಸಮೀಪದ ಯಡೇಹಳ್ಳಿಯ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು. ಜಾತ್ರೆ ನಿಮಿತ್ತ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆ 7 ಗಂಟೆಗೆ 108 ತೆಂಗಿನಕಾಯಿಗಳ ಸಾಮೂಹಿಕ ಗಣಹೋಮ, ನಂತರ ರಥಬೀದಿಯಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥದಲ್ಲಿ ದೇವರ ಉತ್ಸವಮೂರ್ತಿ ಸ್ಥಾಪಿಸಿ ಪೂಜಿಸಲಾಯಿತು. ಭಕ್ತರು ತೇರು ಎಳೆದು ಜೈಕಾರ ಕೂಗಿ ಸಂಭ್ರಮಿಸಿದರು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಥೋತ್ಸವದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.