ಜಿಲ್ಲೆ

ಇಂದು ವರಮಹಾಲಕ್ಷ್ಮೀ ಹಬ್ಬ: ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಂಡ್ಯ: ನಗರದ ಪೇಟೆಬೀದಿ 2ನೇ ಕ್ರಾಸ್‌ನಲ್ಲಿರುವ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಆ.16ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ವೈವಿಧ್ಯಮಯ ಅಲಂಕಾರ ಸೇವೆ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ. 8 ರಿಂದ 10.30ರವರೆಗೆ ಎಂ.ವೈ.ಕುಮಾರ ಮತ್ತು ಯುವರಾಜ್ ತಂಡದಿಂದ ಸ್ಯಾಕ್ಸೋಫೋನ್ ಕಚೇರಿ, ಯೋಗೇಶ್ ನಂದೀಶ್ ವೆಂಕಟೇಶ್ ತಂಡದಿಂದ ಸ್ಯಾಕ್ಸೋಪೋನ್ ವಾದನ, ಸಂಜೆ 5 ಗಂಟೆಗೆ ಸಿ.ಪಿ.ಶ್ರೀನಿವಾಸ್ ಅವರಿಂದ ಕ್ಲಾರಿಯೋನೆಟ್ ವಾದನ ಬಳಿಕ ಚೀಣ್ಯ ಮಂಜುನಾಥ್ ಅವರಿಂದ ದಾಸವಾಣಿ, ಪಿಟೀಲು ಗುರುಮೂರ್ತಿ, ತಬಲ ವೆಂಕಟೇಶ್, ಕುಮಾರಸ್ವಾಮಿ, ಕೀಬೋರ್ಡ್‌ನಲ್ಲಿ ಉಮಾಶಂಕರ್ ಪಕ್ಕವಾದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.