ಆನಂದಪುರ: ಸುತ್ತಮುತ್ತಲ ಗ್ರಾಮಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.
ಹಬ್ಬದ ಮುನ್ನಾ ದಿನವಾದ ಗುರುವಾರ ಸಂಜೆಯೇ ಮನೆ ಮಂದಿಯೆಲ್ಲ ಸೇರಿ ತಳಿರು-ತೋರಣ ಕಟ್ಟಿ ವರಮಹಾಲಕ್ಷ್ಮೀ ಸ್ವಾಗತಕ್ಕೆ ಅಣಿಯಾಗಿದ್ದರು. ಕಲಶ ಸ್ಥಾಪಿಸಿ, ವಿಶೇಷ ಮಂಟಪ ನಿರ್ಮಿಸಿ ಅಲಂಕರಿಸಿದ್ದರು.
ದೇವಿಗೆ ಹೊಸ ವಸ್ತ್ರ, ಆಭರಣ, ಹೂವಿನ ಅಲಂಕಾರ ಮತ್ತು ವಿಶೇಷ ನೈವೇದ್ಯ ತಯಾರಿಸಿದ್ದರು. ಸ್ನೇಹಿತರು, ಆಪ್ತರು, ಬಂಧುಗಳನ್ನು ಕರೆದು ಪ್ರಸಾದ ವಿತರಿಸಿದರು. ಸುಮಂಗಲಿಯರಿಗೆ ಬಾಗಿನ ನೀಡಿದರು.