ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರ್, ಮೊಕ್ತೇಸರ ಪಿ.ಜಿ ಜಗನ್ನಾಥ ರೈ, ಸೀತಾರಾಮ ನವಕಾನ ಮೊದಲಾದವರಿದ್ದರು. 
ಜಿಲ್ಲೆ

ವರಮಹಾಲಕ್ಷ್ಮೀ ಹಬ್ಬದ ಆಮಂತ್ರಣ ಬಿಡುಗಡೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಶ್ರೀ ಉದನೇಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಆ.16ರಂದು ವರಮಹಾಲಕ್ಷ್ಮೀ ವ್ರತ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರ್, ಮೊಕ್ತೇಸರ ಪಿ.ಜಿ ಜಗನ್ನಾಥ ರೈ, ಸೀತಾರಾಮ ನವಕಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕಾರ್ಯದರ್ಶಿ ಗಣೇಶ್ ಪ್ರಸಾದ್ ಕಡಪ್ಪು, ಉದಯ ಶಂಕರ್ ಪಿ.ಎಸ್., ಮಾಜಿ ಆಡಳಿತ ಮಂಡಳಿ ಸದಸ್ಯ ಜಗದೀಶ ಪೆರಡಾಲ, ಜೀರ್ಣೋದ್ಧಾರ ಸಮಿತಿ ಯುವ ಘಟಕ ಕಾರ್ಯದರ್ಶಿ ಭಾಸ್ಕರ. ಅರ್ಚಕ ವೃಂದ, ಸೇವಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.