ಪ್ರಕಸಂ ತಂಡದ ವತಿಯಿಂದ ಸೆ.3 ಸಂಜೆ 4 ಮತ್ತು 7 ಗಂಟೆಗೆ ನಗರದ ಕಿರುರಂಗಮಂದಿರದಲ್ಲಿ ‘ವರಲಕ್ಷ್ಮೀ ಅವಾಂತರ’ ಎಂಬ ಹಾಸ್ಯ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂದು ಕೃತಿಕಾರ್ತಿ ನಾಗವೇಣಿ ರಂಗನ್ ತಿಳಿಸಿದರು.
ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾದ ಬಳಿಕ ತಾವು ಏನಾದರೂ ಸಾಧನೆ ಮಾಡಲು ನಿರ್ಧರಿಸಿದ್ದಲ್ಲದೆ, ನಾಟಕ ಕ್ಷೇತ್ರದಲ್ಲಿ ಮಹಿಳೆಯರು ಕಡಿಮೆ ಇರುವ ಕಾರಣದಿಂದ ಹಾಸ್ಯ ನಾಟಕ ರಚಿಸಲು ಆರಂಭಿಸಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಈ ವೇಳೆ ನಿರ್ದೇಶಕ ಸತೀಶ್ ಮತ್ತಿತರರು ಹಾಜರಿದ್ದರು.