ಕಲ್ಯಾಣಿ ತೀರದಲ್ಲಿರುವ ಸನ್ನಿಧಿಯಲ್ಲಿ ಪೂಜೆ
ಮೇಲುಕೋಟೆ: ಕಲ್ಯಾಣಿ ತೀರದಲ್ಲಿರುವ ಲಕ್ಷ್ಮೀ ಸಮೇತ ಶ್ರೀ ವರಾಹಸ್ವಾಮಿ ದೇವಾಲಯದಲ್ಲಿ ಶನಿವಾರ ವರಾಹ ಜಯಂತಿ ವೈಭವದಿಂದ ನೆರವೇರಿತು.
ಸ್ವಾಮಿಗೆ ಬೆಳಗ್ಗೆ ವೇದ ಮಂತ್ರಪಠಣ ದೊಂದಿಗೆ ಅಭಿಷೇಕ ನೆರವೇರಿಸಲಾಯಿತು.ಮೂರನೇ ಸ್ಥಾನಿಕರಾದ ಸಂಪತ್ ಕುಮಾರನ್ ಮತ್ತು ಸಹೋದರರು.ವರಾಹ ಜಯಂತಿಯ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿ ಸಿದರು.ಸಂಜೆ ಚೆಲುವನಾರಾಯಣ ಸ್ವಾಮಿಯ ಉತ್ಸವ ವರಾಹ ದೇವರ ಸನ್ನಿಧಿಗೆ ಆಗಮಿಸಿತ್ತು. ಈ ಸಂದರ್ಭ ಕೊನ್ನಾರಿ ಗೆಡ್ಡೆಯಲ್ಲಿ ಮಾಡಿದ ಪ್ರಸಾದವನ್ನು ನೈವೇದ್ಯ ಮಾಡಿ ಭಕ್ತರಿಗೆ ವಿತರಿಸಲಾಯಿತು.
ವೈಮಾಳಿಗೆ ಉತ್ಸವ : ಶ್ರೀ ಚೆಲುವನಾರಾಯಣ ಸ್ವಾಮಿ ವೈಮಾಳಿಗೆ ಕೋಡೆ ತಿರುನಾಳ್ ಉತ್ಸವ
ಭಾನುವಾರ ನೆರವೇರಲಿದೆ. ಕಳೆದ 13 ದಿನಗಳಿಂದ ನಡೆಯುತ್ತಿದ್ದ ಕೋಡೆ ತಿರುನಾಳ್ ಉತ್ಸವಕ್ಕೆ ಈ ಸಂದರ್ಭ ಮಂಗಳ ಹಾಡ ಲಾಗುವುದು. ಸರ್ಪ ನಡಿಗೆಯಲ್ಲಿ ಸ್ವಾಮಿ ಮೆಟ್ಟಿಲು ಹತ್ತುವ ಮತ್ತು ಇಳಿಯುವ ವಿಶೇಷ ಶೈಲಿಯ ಉತ್ಸವ ಇದಾಗಿದೆ. ಭಕ್ತರಿಗೆ ಕೋಸಂಬರಿ ಮತ್ತು ಪಾನಕವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಉತ್ಸವಕ್ಕೂ ಮೊದಲು ಶ್ರೀ ಭಗವದ್ ರಾಮಾನುಜಾಚಾರ್ಯರಿಗೆ ಬಂಗಾರದ ಪುಷ್ಪ ಪಲ್ಲಕ್ಕಿ ಉತ್ಸವ ನೆರವೇರಲಿದೆ.