ಜಿಲ್ಲೆ

ವರದಾ ನದಿ ನೀರಿನ ಪ್ರಮಾಣ ಏರಿಕೆ

Gadag - Desk - Tippanna Avadoot

ಶಿರಸಿ: ತಾಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದೆ. ಆದರೆ, ತೀವ್ರತೆ ಸ್ವಲ್ಪ ಇಳಿಮುಖವಾಗಿದೆ.
ಶುಕ್ರವಾರ ಬೆಳಗ್ಗೆ ಸುರಿದ ಮಳೆಗೆ ತಾಲೂಕಿನ ಹೆಗಡೆಕಟ್ಟಾ ಬಳಿಯ ಶಿವಳ್ಳಿಯಲ್ಲಿ ಅಬ್ದುಲ್ ಜಬ್ಬರ್ ಹಸನಸಾಬ ಅವರ ವಾಸ್ತವ್ಯದ ಮನೆ ಕುಸಿದಿದೆ. ಈ ವೇಳೆ ಅವರು ಹೊರಗಡೆ ತೆರಳಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಘಟನೆಯಿಂದ ನಾಲ್ಕು ಲಕ್ಷ ರೂ. ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಬನವಾಸಿ ಬಳಿ ವರದಾ ನದಿಯಲ್ಲಿ ಶುಕ್ರವಾರ ನೀರಿನ ಪ್ರಮಾಣ ಏರಿಕೆಯಾಗಿದೆ. ಮೊಗಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಭತ್ತದ ಗದ್ದೆಯ ಮಟ್ಟಕ್ಕೆ ನೀರು ಹರಿಯುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಇಲ್ಲಿಯ ಭತ್ತದ ಗದ್ದೆಗಳು ಜಲಾವೃತಗೊಳ್ಳುವ ಸಾಧ್ಯತೆ ಹೆಚ್ಚಿದೆ.