ಹಾನಗಲ್ಲ: ಬಾಂದಾರಕ್ಕೆ ಅಳವಡಿಸುವ 4.36 ಲಕ್ಷ ರೂ. ಮೌಲ್ಯದ 208 ಕಬ್ಬಿಣದ ಗೇಟ್ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಶೇಷಗಿರಿ ಗ್ರಾಮದ ಬ್ಯಾರೇಜ್ ಪಕ್ಕದ ಗೋದಾಮಿನಲ್ಲಿ ಶನಿವಾರ ನಡೆದಿದೆ.
ಈ ಕುರಿತು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಕಾಂತಪ್ಪ ಹಿತ್ತಲಮನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗೋದಾಮಿನಲ್ಲಿ ಬಾಂದಾರಕ್ಕೆ ಹಾಕುವ ಗೇಟ್ಗಳನ್ನು ಇಡಲಾಗಿತ್ತು. ಯಾರೋ ಖದೀಮರು ಗೋದಾಮಿನ ಶೆಟ್ರೆಸ್ಅನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಮಳೆ ಹಿನ್ನೆಲೆಯಲ್ಲಿ ಬಾಂದಾರಕ್ಕೆ ಗೇಟ್ ಹಾಕುವ ಸಲುವಾಗಿ ನೋಡಲು ಹೋದಾಗ ಕಳ್ಳತನ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.