ಜಿಲ್ಲೆ

ವರಮಹಾಲಕ್ಷ್ಮೀ ವೃತ ಸರಳ ಆಚರಣೆ

Dakshina Kannada

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ವರಗಳ ಕರುಣಿಸುವ ವರಮಹಾಲಕ್ಷ್ಮೀ ವ್ರತ ಸರಳವಾಗಿ ಆಚರಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ವ್ರತ ಆಚರಣೆ ರದ್ದು ಮಾಡಲಾಗಿತ್ತು.

ಕೆಲವು ದೇವಾಲಯಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು, ಸುರಕ್ಷತಾ ಕ್ರಮ ಅಳವಡಿಸಿಕೊಂಡು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಿದರು. ಹೆಚ್ಚಿನ ಮಂದಿ ಮನೆಗಳಲ್ಲೇ ಆಚರಣೆ ಮಾಡಿದರು.

ಮಂಗಳಾದೇವಿ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಮೊದಲಾದ ದೇವಾಲಯಗಳಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ ಸರಳವಾಗಿ ನಡೆಯಿತು. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಸುದರ್ಶನ ಪುರೋಹಿತರ ಆಚಾರ್ಯತ್ವದಲ್ಲಿ ವ್ರತ ನಡೆಯಿತು.

ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಮೊಕ್ತೇಸರ ಸುಂದರ ಆಚಾರ್ಯ, ಎ.ಲೋಕೇಶ್ ಆಚಾರ್ಯ ಬಿಜೈ, ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ ಹಾಗೂ ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.