ಹಟ್ಟಿಚಿನ್ನದಗಣಿ ಪಟ್ಟಣದಲ್ಲಿ ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ವರಮಹಾಲಕ್ಷ್ಮೀ ವೃತಾಚರಣೆ

Kopala - Desk - Eraveni

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ಪೂರ್ವದ ಶುಕ್ರವಾರ ದಿನ ಆಚರಣೆ ಮಾಡಲಾಯಿತು.

ಹಿಂದಿನ ದಿನ ಗುರುವಾರ ಅಲಂಕಾರ ಮಣೆ ತಯಾರಿ, ವಿವಿಧ ಬಗೆಯ ಹೂಗಳಿಂದ ಲಕ್ಷ್ಮೀ ಅಲಂಕಾರ, ಕಲಶ ಸ್ಥಾಪನೆ, ವಿವಿಧ ಬಗೆಯ ರಂಗವಲ್ಲಿ ಬಿಡಿಸುವುದು.

ಲಕ್ಷ್ಮೀ ಅಷ್ಟೋತ್ತರ, ಶತನಾಮಾವಳಿ ಪಾರಾಯಣ ಶುಕ್ರವಾರ ಸಾಯಂಕಾಲ ಮುತ್ತೈದೆಯರಿಗೆ ಉಡಿತುಂಬುವುದು, ಕೋಸಂಬರಿ, ಪಾನಕ, ಖಾದ್ಯಗಳ ವಿತರಣೆ ಕಾರ್ಯಕ್ರಮ ನಡೆದವು.