ಮಂಡ್ಯ: ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ವಿ.ಸಿ ಫಾರ್ಮ್‌ನ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ವನ ಮಹೋತ್ಸವ ಆಚರಿಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಗಿಡಗಳನ್ನು ನೆಟ್ಟರು. ಬಳಿಕ ಪರಿಸರದ ಮಹತ್ವ, ಅರಣ್ಯ ನಾಶದಿಂದಾಗುತ್ತಿರುವ ದುಷ್ಪರಿಣಾಮ, ಪರಿಸರ ನಾಶದಿಂದ ಕೃಷಿ ಮೇಲಾಗುತ್ತಿರುವ ಸಮಸ್ಯೆಗಳು ಮತ್ತು ಗಿಡ ನೆಟ್ಟು ಪೋಷಣೆ ಮಾಡುವುದರಿಂದಾಗುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು.
ಶಿಬಿರದ ಸಂಯೋಜಕರಾದ ಡಾ.ಎ.ಡಿ.ರಂಗನಾಥ್, ಡಾ.ಜಿ.ನಾಗೇಶ್, ಡಾ.ಜೆ.ಮಹಾದೇವ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಇತರರಿದ್ದರು.