ಜಿಲ್ಲೆ

ವಲಯ ಅಧ್ಯಕ್ಷೆಯಾಗಿ ವನಿತಾ ಆಯ್ಕೆ

ಇಂದಿರಾ ಎನ್ ಕೆ

ಕೋಟ: ಬ್ರಹ್ಮಾವರ ತಾಲೂಕಿನ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಅಧ್ಯಕ್ಷೆಯಾಗಿ ವನಿತಾ ಉಪಾಧ್ಯಾ ಆಯ್ಕೆಯಾಗಿದ್ದಾರೆ. ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಗೊಳಿಸಲಾಯಿತು. ಗೌರವಾಧ್ಯಕ್ಷೆಯಾಗಿ ಜಾಹ್ನವಿ ಹೇರ್ಳೆ, ಉಪಾಧ್ಯಕ್ಷೆಯಾಗಿ ಶ್ರೀದೇವಿ ಹೊಳ್ಳ, ಕಾರ್ಯದರ್ಶಿಯಾಗಿ ಸ್ಮಿತಾರಾಣಿ, ಜತೆಕಾರ್ಯದರ್ಶಿಯಾಗಿ ಪಾರ್ವತಿ ಮಯ್ಯ, ಕೋಶಾಧಿಕಾರಿಯಾಗಿ ಸುಜಾತ ಬಾಯಿರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭಾರತಿ ಮಯ್ಯ ಆಯ್ಕೆಯಾದರು.