ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯಾಭ್ಯಾಸದೊಂದಿಗೆ ಶ್ರಮ, ಶಿಸ್ತಿಗೆ ಆದ್ಯತೆ ನೀಡಿ ಉನ್ನತ ವ್ಯಕ್ತಿತ್ವ ಹೊಂದುವುದು ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ವಾಣಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕುಶಾಲಪ್ಪ ಗೌಡ ಹೇಳಿದರು.
ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ‘ವಿದ್ಯಾ ಪ್ರವೇಶಂ’ ಓರಿಯೆಂಟೇಶನ್ ಉದ್ಘಾಟಿಸಿ ಮಾತನಾಡಿದರು.
ವಾಣಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗಣೇಶ್ ಗೌಡ, ಆಡಳಿತ ಅಧಿಕಾರಿ ಪ್ರಸಾದ್‌ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುರೇಂದ್ರ ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೌಮ್ಯಾ ಬಿ. ವಂದಿಸಿದರು. ಅನುರಾಧಾ ಕೆ.ರಾವ್ ಕಾರ್ಯಕ್ರಮ ನಿರೂಪಿಸಿದರು.
ವಿಜ್ಞಾನ ವಿಭಾಗ ಉಪನ್ಯಾಸಕರಾದ ರಾಧಿಕಾ, ವಿನಯ ಭಿಡೆ, ಸೌಮ್ಯಾ ಬಿ., ಅನುಷಾ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ನಡೆಸಿಕೊಟ್ಟರು. ಉಪನ್ಯಾಸಕ ಹರ್ಷಿತ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಸುಧೀರ್ ಕೆ.ಎನ್. ಮತ್ತು ಶಂಕರ್ ರಾವ್ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಾವಳಿಗಳನ್ನು ತಿಳಿಸಿದರು.