ಜಿಲ್ಲೆ

‘ವಂದೇ ಮಾತರಂ’ ವಾರ್ಷಿಕೋತ್ಸವ

ಹುಬ್ಬಳ್ಳಿ: ಎನ್‌ಸಿಸಿ 28 ಕರ್ನಾಟಕ ಬೆಟಾಲಿಯನ್ ವತಿಯಿಂದ ದೇಶಭಕ್ತಿ ಗೀತೆಯಾದ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಕಮಾಂಡಿಂಗ್ ಆಫೀಸರ್ ಹಾಗೂ ಕರ್ನಲ್ ಜಸ್‌ದೀಪ್ ಸಿಂಗ್ ಅವರ ನೇತೃತ್ವದಲ್ಲಿ ‘ವಂದೇ ಮಾತರಂ’ ಗೀತೆ ರಚಿಸಿದ ಪಶ್ಚಿಮ ಬೆಂಗಾಳದ ಬಂಕಿಮ್‌ಚಂದ್ರ ಚಟರ್ಜಿ ಅವರಿಗೆ ಗೌರವ ಸಲ್ಲಿಸಲಾಯಿತು. ನಂತರ ವಂದೇ ಮಾತರಂ ಸಮೂಹಗಾಯನ ಜರುಗಿತು. ಶಪಥ ಸ್ವೀಕಾರ ಸಮಾರಂಭ, ವಂದೇ ಮಾತರಂ ಘೋಷಣೆಗಳು ಮೊಳಗಿದವು.

800ಕ್ಕೂ ಹೆಚ್ಚು ಎನ್‌ಸಿಸಿ ಕ್ಯಾಡೆಟ್, ಸಹಾಯಕ ಎನ್‌ಸಿಸಿ ಅಧಿಕಾರಿಗಳು, ಕೇರ್ ಟೇಕರ್ ಅಧಿಕಾರಿಗಳು, ಸ್ಥಾಯಿ ತರಬೇತುದಾರರು ಭಾಗವಹಿಸಿದ್ದರು.