ತುಮಕೂರು: ವಿ ಸೋಮಣ್ಣ ಅವರು ಕೇಂದ್ರ ರೈಲ್ವೆ ಸಹಾಯಕ ಖಾತೆ ಸಚಿವರಾದ ಬೆನ್ನಲ್ಲೆ ತುಮಕೂರಿನ ಜನರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹಲವು ದಿನಗಳ ಬೇಡಿಕೆಯಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಜಿಲ್ಲೆಯ ಜನರಿಗೆ ಸಿಗಲಿದೆ.
ಇದನ್ನೂ ಓದಿ: ಜೈಲಿನಲ್ಲಿರುವ ನಟ ದರ್ಶನ್ರನ್ನು ಭೇಟಿಯಾದ ರಚಿತಾ ರಾಮ್!
ಈಗಾಗಲೇ ಬೆಂಗಳೂರು - ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಾಳೆಯಿಂದ (ಆಗಸ್ಟ್ 23 ರಿಂದ) ತುಮಕೂರಿನಲ್ಲಿ ನಿಲುಗಡೆಯಾಗಲಿದೆ. ಶುಕ್ರವಾರ ಸಂಜೆ ಸಚಿವ ವಿ. ಸೋಮಣ್ಣ ಅವರೇ ತುಮಕೂರಿನಲ್ಲಿ ವಂದೇ ಭಾರತ್ ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ವಿ.ಸೋಮಣ್ಣ ಅವರು, ತುಮಕೂರಿನಲ್ಲಿ ವಂದೇ ಭಾರತ್ ರೈಲಿಗೆ ನಾಳೆ ಆಗಸ್ಟ್ 23 ರಂದು ಸಂಜೆ 5.30 ಗಂಟೆಗೆ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.
ವಂದೇ ಭಾರತ್ ರೈಲು ತುಮಕೂರಿನಲ್ಲಿ ನಾಳೆ (ಆಗಸ್ಟ್ 23)ರ ಸಂಜೆ 6.18ಕ್ಕೆ ರೈಲು ಮೊದಲ ಸ್ಟಾಪ್ ನೀಡಲಿದೆ. ಆ ಬಳಿಕ ಆಗಸ್ಟ್ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳ್ಳಿಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ.
ತುಮಕೂರಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ವಿ ಸೋಮಣ್ಣ ಕ್ರಮಕೈಗೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ 150 ಕೋಟಿ ರೂ., ತುಮಕೂರು-ರಾಯದುರ್ಗಕ್ಕೆ (ಕಲ್ಯಾಣದುರ್ಗ ಮಾರ್ಗ) 250 ಕೋಟಿ ರೂ. ಅನುದಾನ ನೀಡಲಾಗಿದೆ.