ಉಡುಪಿಯ ಎಸ್​ಎಲ್​ಆರ್​ಎಂ ಘಟಕದಲ್ಲಿ ಗಿಡ ನೆಡುವ ಮೂಲಕ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಸಂತೋಷ್​ ಕರ್ನೆಲಿಯೊ, ಜೆರಾಲ್ಡ್​ ರೊಡ್ರಿಗಸ್​, ಒಲಿವೀಯಾ ಡಿಮೆಲ್ಲೊ, ಲೂವಿಸ್​ ಡಿಸೋಜಾ, ಶಾಂತಿ ಪಿರೇರಾ, ಜುಲಿಯೆಟ್​ ಡಿಸೋಜಾ, ಜಸಿಂತಾ ಡಿಸೋಜಾ ಇತರರಿದ್ದರು. 
ಜಿಲ್ಲೆ

ನಿತ್ಯವೂ ಪರಿಸರ ರಕ್ಷಣೆ ಜಾಗೃತಿ ಅಗತ್ಯ

ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​ ಅಭಿಪ್ರಾಯ | ವನಮಹೋತ್ಸವ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಒಂದು ದಿನ ಮಾತ್ರ ವನಮಹೋತ್ಸವ, ಪರಿಸರ ದಿನದ ಕಾರ್ಯಕ್ರಮ ಮಾಡಿದರೆ ಸಾಲದು. ಆ ಕುರಿತು ನಿತ್ಯ ಜಾಗೃತಿ ವಹಿಸುವುದು ಅತಿ ಅತ್ಯವಿದೆ. ಇಲ್ಲದಿದ್ದಲ್ಲಿ ನಮಗೆಲ್ಲ ಗಂಡಾಂತರ ತಪ್ಪಿದ್ದಲ್ಲ ಎಂದು ಕೆಥೊಲಿಕ್​ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್​ ಗೊನ್ಸಾಲ್ವಿಸ್​ ಅಭಿಪ್ರಾಯಪಟ್ಟರು.

ಉಡುಪಿ ಪ್ರದೇಶ ಕೆಥೊಲಿಕ್​ ಸಭಾ ವತಿಯಿಂದ ಶಿರ್ವ ವಲಯ, ಘಟಕ ಹಾಗೂ ಮಟ್ಟಾರು ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಎಸ್​ಎಲ್​ಆರ್​ಎಂ ಘಟಕದಲ್ಲಿ ಬುಧವಾರ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್​ ಬಳಕೆ ಬೇಡ

ಪ್ಲಾಸ್ಟಿಕ್​ ಬಳಕೆಯಿಂದ ಪರಿಸರ ಮಾಲಿನ್ಯಗೊಳ್ಳುತ್ತಿದ್ದು, ಪ್ಲಾಸ್ಟಿಕ್​ ಬಳಕೆ ತ್ಯಜಿಸಬೇಕಿದೆ. ಪರಿಸರದ ಸಮತೋಲನ ಕಾಪಾಡಲು ಹೆಚ್ಚು ಗಿಡಗಳನ್ನು ನೆಡಬೇಕಿದೆ. ಪರಿಸರ ಹಸಿರಾಗಿದ್ದರೆ ಮಾತ್ರ ಪ್ರತಿಯೊಬ್ಬರ ಉಸಿರೂ ಸ್ವಚ್ಛವಾಗಿರುತ್ತದೆ ಎಂದರು.

ವೈಯುಕ್ತಿಕ ಬಹುಮಾನ

ಕೆಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಸಂತೋಷ್​ ಕರ್ನೆಲಿಯೊ ಮಾತನಾಡಿ, ಉಡುಪಿ ಧರ್ಮಪ್ರಾಂತ್ಯದ 51 ಘಟಕಗಳಲ್ಲಿ ಕಳೆದ ಭಾನುವಾರ ಏಕಕಾಲದಲ್ಲಿ ವನಮಹೋತ್ಸವ ಆಚರಿಸಿದ್ದು, ಸಾರ್ವಜನಿಕರಿಗೆ ಸಾವಿರಾರು ಗಿಡ ವಿತರಿಸಲಾಗಿದೆ. ಕಾಟಾಚಾರಕ್ಕೆ ಗಿಡ ನೆಡದೆ, ಮರವಾಗಿ ಬೆಳೆಯುವ ತನಕ ಪೋಷಣೆ ಮಾಡಬೇಕು. ಸರಿಯಾಗಿ ಪೋಷಣೆ ಮಾಡಿದವರಿಗೆ ವೈಯುಕ್ತಿಕ ಬಹುಮಾನ ನೀಡಲಾಗುವುದು ಎಂದರು.

ಕೆಥೊಲಿಕ್​ ಸಭಾ ಉಡುಪಿ ಪ್ರದೇಶದ ಕೋಶಾಧಿಕಾರಿ ಜೆರಾಲ್ಡ್​ ರೊಡ್ರಿಗಸ್​, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ, ಸಹ ಕಾರ್ಯದರ್ಶಿ ಲೂವಿಸ್​ ಡಿಸೋಜಾ, ಪದಾಧಿಕಾರಿ ಶಾಂತಿ ಪಿರೇರಾ, ಶಿರ್ವ ವಲಯ ಅಧ್ಯಕ್ಷ ಜುಲಿಯೆಟ್​ ಡಿಸೋಜಾ, ಘಟಕಾಧ್ಯಕ್ಷೆ ಜಸಿಂತಾ ಡಿಸೋಜಾ, ಉಡುಪಿ ವಲಯಾಧ್ಯಕ್ಷ ಲೆಸ್ಲಿ ಕರ್ನೆಲಿಯೊ, ಕಲ್ಯಾಣಪುರ ವಲಯಾಧ್ಯಕ್ಷ ರೋಸಿ ಕ್ವಾಡ್ರಸ್​, ಶಿರ್ವ ಗ್ರಾಪಂ ಉಪಾಧ್ಯಕ್ಷ ವಿಲ್ಸನ್​ ರೊಡ್ರಿಗಸ್​, ಮಟ್ಟಾರು ಗ್ರಾಪಂ ಅಧ್ಯಕ್ಷ ಲಕ್ಷ್ಮಣ್​ ಪೂಜಾರಿ, ಗ್ರಾಪಂ ಮಾಜಿ ಸದಸ್ಯ ದಿನೇಶ್​ ಪಾಟ್ಕರ್​, ಪೋಸ್ಟ್​ ಮಾಸ್ಟರ್​ ದಿನೇಶ್​ ಪಾಟ್ಕರ್​, ಮಟ್ಟಾರ್​ ಬೊಬ್ಬರ್ಯ ದೇವಸ್ಥಾನದ ಅರ್ಚಕ ರಮೇಶ್​ ಶೆಟ್ಟಿ, ಸ್ಥಳೀಯರಾದ ಸಂಜೀವ ಆಚಾರಿ ಇತರರು ಉಪಸ್ಥಿತರಿದ್ದರು.