ಜಿಲ್ಲೆ

ಮುಂಡರಗಿಯಲ್ಲಿ ವನಮಹೋತ್ಸವ

ರವಿ ಎಸ್. ಬಳೂಟಗಿ

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಜು. 28ರಂದು ಬೆಳಗ್ಗೆ 10.30ಕ್ಕೆ ವನಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸಂತೋಷ ಕುಮಾರ ಕೆಂಚಪ್ಪಣ್ಣವರ, ಎಚ್.ಎಂ. ಪಢ್ನೇಶಿ, ಸಿ.ಎಸ್. ಅರಸನಾಳ, ಮಂಜುನಾಥ ಮೇಗಲಮನಿ, ಎಸ್.ಎಸ್. ಪಟ್ಟಣಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಾಚಾರ್ಯ ಶರಣಕುಮಾರ ಬುಗಟಿ ತಿಳಿಸಿದ್ದಾರೆ.