ಪಾರಾಣೆ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೊೃೀತ್ಸವ ಮತ್ತು ವನಮಹೋತ್ಸವ ಆಚರಿಸಲಾಯಿತು . 
ಜಿಲ್ಲೆ

ಪಾರಾಣೆ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಣೆ

ಅಭಿನಯ್ ಎಚ್.ಎಂ

ನಾಪೋಕ್ಲು: ಸಮೀಪದ ಪಾರಾಣೆ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೊೃೀತ್ಸವ ಮತ್ತು ವನಮಹೋತ್ಸವ ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ ವಹಿಸಿದ್ದು, ಕಾರ್ಯದರ್ಶಿ ಮುಕ್ಕಾಟಿರ ಕುಶಾಲಪ್ಪ , ಲಯನ್ಸ್ ಕಾಂಡಂಡ ರೇಖಾ ಪೊನ್ನಣ್ಣ . ಮುಖ್ಯ ಶಿಕ್ಷಕಿ ಮುಕಾಟಿರ ರಜನಿ ಪಾಲ್ಗೊಂಡಿದ್ದರು.

ಮಹನೀಯರ ಆದರ್ಶವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಅತಿಥಿಗಳು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವನಮೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ತಳಿಯ ಹಲವಾರು ಹಣ್ಣಿನ ಗಿಡಗಳನ್ನು ಒದಗಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಲಯನ್ಸ್ ಕ್ಲಬ್ ವತಿಯಿಂದ ಅರ್ಹತಾ ಪತ್ರ, ಬಹುಮಾನ ವಿತರಿಸಲಾಯಿತು. ಲಯನ್ಸ್ ಕ್ಲಬ್ ಸದಸ್ಯರಾದ ಮುಕ್ಕಾಟಿರ ವಿನಯ್, ಕುಂಡ್ಯೋಳಂಡ ಮುತ್ತಪ್ಪ ,ಎಳ್ತಂಡ ಬೋಪಣ್ಣ ಅಪ್ಪು ಮಣಿಯಂಡ ಭೀಮಯ್ಯ, ಮಾದೆಯಂಡ ಕುಟ್ಟಪ್ಪ, ಡಾ.ಪಂಚಮ್ ತಿಮ್ಮಯ್ಯ ಇತರರಿದ್ದರು.