ಢವಳಗಿ: ಸಮೀಪದ ವನಹಳ್ಳಿ ಗ್ರಾಮದಲ್ಲಿ ನ.30 ರಿಂದ ಡಿ.3 ರವರೆಗೆ ಜಟ್ಟಿಂಗೇಶ್ವರ ಹಾಗೂ ಗ್ಯಾನಪ್ಪಮುತ್ಯಾ ಜಾತ್ರೆ ನಡೆಯಲಿದೆ.
ನ.30 ರಂದು ಮಧ್ಯಾಹ್ನ 2 ಗಂಟೆಗೆ ಡೊಳ್ಳು ವಾದ್ಯಮೇಳದೊಂದಿಗೆ ನಡಹಳ್ಳಿ, ಬಳವಾಟ, ಮುದ್ದೇಬಿಹಾಳ ಹಾಗೂ ಯರಝರಿ ಗ್ರಾಮದ ಮೂಲಕ ಪಲ್ಲಕ್ಕಿ ಹಾಗೂ ಲಗಮವ್ವನ ಸತ್ತಿಗೆ ಕೃಷ್ಣಾನದಿಯಲ್ಲಿ ಗಂಗಸ್ಥಳಕ್ಕೆ ಹೋಗುವುದು.
ಡಿ.1 ರಂದು ಬೆಳಗ್ಗೆ 6 ಗಂಟೆಗೆ ಯರಝರಿ ಗ್ರಾಮದ ಸಿದರಾಯ ಮುತ್ಯಾ ಹಾಗೂ ಜಟ್ಟಿಂಗೇಶ್ವರರ ಜೋಡು ಪಲ್ಲಕ್ಕಿ ಹಾಗೂ ಸತ್ತಿಗೆಯೊಂದಿಗೆ ಗಂಗೆ ಮಿನಿಯುವುದು. ರಾತ್ರಿ 8 ಗಂಟೆಗೆ ಜಟ್ಟಿಂಗೇಶ್ವರರ ದೇವಸ್ಥಾನದಲ್ಲಿ ಭಕ್ತರಿಂದ ಶಿವಭಜನೆ, ರಾತ್ರಿ 11 ಗಂಟೆಗೆ ಗೂಡಿಹಾಳ, ಬಳವಾಟ, ನಡಹಳ್ಳಿ ಗ್ರಾಮದ ಮುಖಾಂತರ ಮರಳಿ ವನಹಳ್ಳಿ ಗ್ರಾಮಕ್ಕೆ ಆಗಮಿಸುವುದು. ಹಾದಿಯಲ್ಲಿ ಗೂಡಿಹಾಳ, ಬಳವಾಟ, ನಡಹಳ್ಳಿ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಇರುವುದು.
ಡಿ.2 ರಂದು ನಸುಕಿನ ಜಾವ 5.30 ಗಂಟೆಗೆ ಡೊಳ್ಳಿನ ವಾಲಗ ಮತ್ತು ವಾದ್ಯ-ವೈಭವದೊಂದಿಗೆ ಮತ್ತು ಗ್ರಾಮದ ಸಂಗಮೇಶ ಚೆಟ್ಟೆರ ಅವರ ಕುದುರೆ ಕುಣಿತದೊಂದಿಗೆ ಜೋಡು ಪಲ್ಲಕ್ಕಿಗಳು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರುವುದು. ಬೆಳಗ್ಗೆ 11 ಭಕ್ತರಿಂದ ಡೊಳ್ಳಿನ ಹಾಡಕಿ ಸೇವೆ ಇರುವುದು. ಮಧ್ಯಾಹ್ನ 1 ಗಂಟೆಗೆ ಸಪ್ಪಾನಹುಗ್ಗಿ ಮತ್ತು ಹಾಲು ಮಹಾ ಪ್ರಸಾದ ಜರುಗುವುದು. ಮಧ್ಯಾಹ್ನ 12 ಗಂಟೆಯಿಂದ ಪುರುಷರಿಂದ ಕಲ್ಲು ಜಗ್ಗುವ ಸ್ಪರ್ಧೆ, ಸಂಜೆ 3 ಗಂಟೆಯಿಂದ ಜೋಡೆತ್ತಿನಿಂದ ಪುಟ್ಟಿಗಾಡಿ ರೇಸ್, ರಾತ್ರಿ 10 ಗಂಟೆಗೆ ವಾದಿ-ಪ್ರತಿವಾದಿ ಡೊಳ್ಳಿನ ಪದಗಳು ಜರುಗುವುದು.
ಡಿ.3 ರಂದು ಬೆಳಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಆಶೀರ್ವದಿಸಿ ಶಿವನುಡಿ ಹೇಳುವುದರ ಜತೆಗೆ ಗುರು ಶಿಷ್ಯರು ಮತ್ತು ಲಗಮ್ಮವ್ವನ ಸತ್ತಿಗೆ ಹಾಗೂ ಈರಗಾರ ಪೂಜಾರಿಗಳಿಂದ ಈರಗಾರ ಆಟ ಜರುಗುವುದು. ನಂತರ 11 ಪಲ್ಲಕ್ಕಿಗಳ ಮೆರವಣಿಗೆಯಾಗಿ ಮರಳಿ ಗದ್ದುಗೆಗ ತೆರಳುವುದು. ಮಧ್ಯಾಹ್ನ 12:30ಕ್ಕೆ ಹಾಲು ಹಲ್ಲಿನ ಟಗರಿನ ಕಾಳಗ ನಡೆಯುವುದು. ನಂತರ 2 ಹಲ್ಲಿನ ಟಗರಿನ ಕಾಳಗ ಇರುವುದು. ಕಾರ್ಯಕ್ರಮದಲ್ಲಿ ಯಾವುದೇ ಅನಾಹುತಗಳಾದರೆ ಕಮಿಟಿ ಜವಾಬ್ದಾರಿ ಆಗುವುದಿಲ್ಲ. ಮಾಹಿತಿಗಾಗಿ ಮೊ. 9611075767 ಮತ್ತು 9900660281ಗೆ ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.