ಎಮ್ಮಿಗನೂರಿನಲ್ಲಿ ಆರಂಭಗೊಂಡ ಶ್ರೀ ಕಲಬುರುಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಪ್ರವಚನಕಾರ ಶಿವಶರಣಯ್ಯಶಾಸ್ತ್ರಿ ಮಾತನಾಡಿದರು. ಪುರಾಣ ಪಠಣಕಾರ ತೆಕ್ಕಲಕೋಟೆ ಪಂಪಾಪತಿ ಗವಾಯಿ, ತಬಲವಾದಕ ಅಂಬರೀಷ್ ಹೂಗಾರ್ ಇದ್ದರು. 
ಜಿಲ್ಲೆ

ಮೌಲ್ಯಾಧಾರಿತ ಜೀವನಕ್ಕೆ ಪುರಾಣ ಸಹಕಾರಿ

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೇಸಿದ್ಧೇಶ್ವರ ಮಠದಲ್ಲಿ ಶನಿವಾರ ಶ್ರೀ ಕಲಬುರಗಿ ಶರಣಬಸವೇಶ್ವರ ಮಹಾಪುರಾಣ ಆರಂಭಗೊಂಡಿತು.

ಪುರಾಣ ಪ್ರವಚನಕಾರ ಶಿವಶರಣಯ್ಯಶಾಸ್ತ್ರಿ ಮಾತನಾಡಿ, ಪುರಾಣ ಪ್ರವಚನ ಆಲಿಸುವುದರಿಂದ ಸರಳ ಜೀವನ ರೂಢಿಸಿಕೊಳ್ಳಲು ಸಾಧ್ಯ. ಮೌಲ್ಯಾಧಾರಿತ ಜೀವನ ಸಾಗಿಸಲು ಸಹಕಾರಿ. ಪಾಲಕರು ಮಕ್ಕಳಿಗೆ ಸಂಸ್ಕಾರ, ಆಚಾರ ವಿಚಾರ ಕಲಿಸಲು ಮುಂದಾಗಬೇಕು ಎಂದರು.

ಪುರಾಣ ಪಠಣಕಾರ ತೆಕ್ಕಲಕೋಟೆ ಪಂಪಾಪತಿ ಗವಾಯಿ, ತಬಲವಾದಕ ಅಂಬರೀಷ್ ಹೂಗಾರ್, ಪ್ರಮುಖರಾದ ಎಚ್.ಎಂ.ಯೋಗಪ್ಪಸ್ವಾಮಿ, ಎಚ್.ಎಂ.ಜಡಿಸ್ವಾಮಿ, ಎಚ್.ಎಂ.ಚನ್ನವೀರಯ್ಯಸ್ವಾಮಿ, ಎನ್.ಸೂಗಪ್ಪ, ಎಚ್.ರುದ್ರಪ್ಪ, ಬಿ.ಬಸವರಾಜ್, ಶಿವನೇಗೌಡ ರಾಮಪ್ಪ, ಬಡಿಗೇರ್ ವೀರೇಶ್, ಆಗಲೂರು ಬಸಪ್ಪ ಇತರರಿದ್ದರು.