ಕಂಪ್ಲಿ ಗುರುಮಠದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಎಮ್ಮಿಗನೂರಿನ ಸಹಿಪ್ರಾ ಶಾಲೆ ಅತಿಥಿ ಶಿಕ್ಷಕ ಎಸ್.ರಾಮು ಮಾತನಾಡಿದರು. ಪ್ರಮುಖರಾದ ಕೆ.ಚಂದ್ರಶೇಖರ, ಆದೇಶ ಜವಳಿ, ಕೆ.ಎಂ.ಚಂದ್ರಶೇಖರ ಇದ್ದರು. 
ಜಿಲ್ಲೆ

ಮೌಲ್ಯಗಳನ್ನು ಪ್ರತಿಪಾದಿಸುವ ವಚನ ಸಾಹಿತ್ಯ

ಕಂಪ್ಲಿ: ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಮ್ಮಿಗನೂರು ಸಹಿಪ್ರಾ ಶಾಲೆ ಅತಿಥಿ ಶಿಕ್ಷಕ ಎಸ್.ರಾಮು ತಿಳಿಸಿದರು.

ಗುರುಮಠದಲ್ಲಿ ಓದ್ಸೋ ಕರಿಬಸಯ್ಯ ಶಿವಾನಂದಾಶ್ರಮದಲ್ಲಿ ಗುರುವಾರ ಲಿಂ.ಓದ್ಸೋ ಜಡೆಮ್ಮ ಸ್ಮರಣಾರ್ಥ ಜರುಗಿದ 241ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್(ಎನ್‌ಸಿಇಆರ್‌ಟಿ)ಸಂಸ್ಥೆ 83ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವಂತೆ ಸೂಚಿಸಿದೆ. ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಘನತೆ, ಹಿರಿಮೆ ಹೆಚ್ಚಿ ಸಾರ್ಥಕತೆ ಬದುಕನ್ನು ರೂಪಿಸುತ್ತದೆ. ವಚನ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು ಅಧ್ಯಯನ, ಅಳವಡಿಕೆ ಅಗತ್ಯ ಎಂದರು.

ಸಹಿಪ್ರಾ ಶಾಲೆ ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣದೊಡನೆ ನೈತಿಕತೆಯನ್ನು ಪ್ರೇರೇಪಣೆಗೊಳಿಸಬೇಕಿದೆ. ಶಿಕ್ಷಕ, ತಂದೆ ತಾಯಿ, ಹಿರಿಯರಿಗೆ ಗೌರವಕೊಡುವುದನ್ನು ಕಲಿಸಬೇಕಿದೆ ಎಂದರು.

ಎಮ್ಮಿಗನೂರಿನ ಸಹಿಪ್ರಾ ಶಿಕ್ಷಕ ಆದೇಶ ಜವಳಿ, ಪ್ರಮುಖರಾದ ಕೆ.ಎಂ.ಚಂದ್ರಶೇಖರ, ಎಚ್.ಎಂ.ಜಗದೀಶ, ಯೋಗೇಶ್, ಕಲ್ಗುಡಿ ನಾಗರತ್ನ, ಲೋಕೇಶ, ಶೇಖಣ್ಣ, ಕೆ.ಎಂ.ಜಡೆಮ್ಮ ಹೇಮಯ್ಯಸ್ವಾಮಿ, ಎಸ್.ಡಿ.ಬಸವರಾಜ, ಸಿದ್ದರಾಮಯ್ಯಸ್ವಾಮಿ, ಗುರುಬಸಪ್ಪ ಇತರರಿದ್ದರು.