ಶಿವಮೊಗ್ಗ ಬಸವಕೇಂದ್ರದಲ್ಲಿ ಕೆ.ವಿ.ಜ್ಯೋತಿಕುಮಾರಿ ಉಪನ್ಯಾಸ ನೀಡಿದರು. ಚಂದ್ರಪ್ಪ, ಚನ್ನಬಸಪ್ಪ ನ್ಯಾಮತಿ ಉಪಸ್ಥಿತರಿದ್ದರು.  
ಜಿಲ್ಲೆ

ವಚನ ಸಾಹಿತ್ಯದಲ್ಲಿ ಅಮೂಲ್ಯ ಮೌಲ್ಯ ಅಭಿವ್ಯಕ್ತ

ಶಿವಮೊಗ್ಗ: ದೇಶದಲ್ಲಿ ಸ್ವಾತಂತ್ರೃ, ಸಮಾನತೆ, ಸಾಮಾಜಿಕ ನ್ಯಾಯ ಪ್ರಮುಖ ಮೌಲ್ಯಗಳಾಗಿದ್ದು, 84 ಮೌಲ್ಯಗಳನ್ನು ಗುರುತಿಸಲಾಗಿದೆ. ಭಾರತದ ಐತಿಹಾಸಿಕ ಹಿನ್ನೆಲೆ ಗಮನಿಸಿದರೆ ಪ್ರತಿಯೊಂದು ಕಾಲ ಘಟ್ಟದಲ್ಲಿಯೂ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಬಿಂಬಿತವಾಗಿದೆ ಎಂದು ಡಯಟ್ ಉಪನ್ಯಾಸಕಿ ಕೆ.ವಿ.ಜ್ಯೋತಿಕುಮಾರಿ ಹೇಳಿದರು.

ನಗರದ ಬಸವಕೇಂದ್ರದಲ್ಲಿ ಸಮಾನ ಮನಸ್ಕರ ಬಳಗ ಹಾಗೂ ಬಸವ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾತಂತ್ರೃದ ಬೆಳಕಿನಲ್ಲಿ ಸಾಂವಿಧಾನಿಕ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ಲಕ್ಷಾಂತರ ಹೋರಾಟಗಾರ ತ್ಯಾಗ, ಪರಿಶ್ರಮದ ಫಲವಾಗಿ ಸಿಕ್ಕಿರುವ ಸ್ವಾತಂತ್ರೃವನ್ನು ಬಳಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಬಸವಾದಿ ಶರಣರು ಅನುಭವ ಮಂಟಪದಲ್ಲಿ ಅಂದೋಲನ ರೂಪದಲ್ಲಿ ಜಾತಿ, ಧರ್ಮ ಮೀರಿದ ಸಮಾಜ ನಿರ್ಮಾಣ ಮಾಡಲು ಮೌಲ್ಯಯುತ ಅಂಶಗಳನ್ನು ತಿಳಿಸಿದರು. ಕಾಯಕ, ದಾಸೋಹ, ಸಾಮಾಜಿಕ ನ್ಯಾಯದ ಮಹತ್ವ ಸಾರಿದರು. ಅತ್ಯಮೂಲ್ಯ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಸಮಾನ ಮನಸ್ಕರ ಬಳಗದ ಚನ್ನಬಸಪ್ಪ ನ್ಯಾಮತಿ, ನಿವೃತ್ತ ಅಭಿಯಂತರ ಚಂದ್ರಪ್ಪ, ಸಮಾನ ಮನಸ್ಕರ ಬಳಗದ ಸದಸ್ಯರಾದ ಹಸನ್ ಬೆಳ್ಳಿಗನೂಡು, ಜಿ.ಎಸ್.ಅನಂತ, ಶಿವಕುಮಾರ್, ಅಣ್ಣಪ್ಪ ಒಂಟಮಾಳಗಿ, ಬಸವನಗೌಡ, ಸತೀಶ್, ಪಾಲಾಕ್ಷಪ್ಪ, ಪ್ರವೀಣ್ ಜವಳಿ, ಅಣ್ಣಪ್ಪ ಅರಳೇಹಳ್ಳಿ ಇತರರಿದ್ದರು. ಶಿಕ್ಷಕ ಕೆ.ಸತೀಶ್, ನಾಗರಾಜ್, ವಾಣಿ ಮತ್ತು ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.