ಜಿಲ್ಲೆ

2.25ಲಕ್ಷ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆ ವಶ

ಶಿರಸಿ: ತಾಲೂಕಿನ ನರೂರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.25 ಲಕ್ಷ ರೂ. ಮೌಲ್ಯದ 64.950 ಕೆಜಿ ಶ್ರೀಗಂಧ ದ ತುಂಡುಗಳನ್ನು ಅರಣ್ಯ ಇಲಾಖೆಯ ವಲಯ ಸಂಚಾರಿ ದಳದ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಆರೋಪಿ ಸದಾನಂದ ಬಸಪ್ಪ ಗೌಡ ಪರಾರಿಯಾಗಿದ್ದು ಬಂಧನಕ್ಕಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವಲಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಅಜಯ ಎಚ್. ನಾಯ್ಕ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಇಲಿಯಾಸ್ ಶೇಖ್, ರಾಜು ಪೂಜಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.