ಜಿಲ್ಲೆ

ವಾಲ್ಮೀಕಿ ರಾಮಾಯಣ ಸತ್ವವುಳ್ಳ ಕಾವ್ಯ

ನವಲಗುಂದ: ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣವು ಸತ್ವವುಳ್ಳ ಹಾಗೂ ಮೌಲ್ಯಯುತವಾದ ಕಾವ್ಯವಾಗಿದ್ದು, ಶ್ರೇಷ್ಠ ಸಾಹಿತ್ಯದ ಸೃಷ್ಟಿಗೆ ಕಾರಣವಾಗಿದೆ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂತೋಷ ಹುಬ್ಬಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಬಿ. ಬಾಗಡಿ ಮಾತನಾಡಿ, ವಾಲ್ಮೀಕಿ ಅವರು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದರು.

ಡಾ. ನಾಗರತ್ನ ಕುರಡೇಕರ, ಶ್ರೀಧರ ಲೋನಕರ, ಪ್ರತಿಭಾ ನಿಡಗುಂದಿ, ರವಿ ಬ್ಯಾಹಟ್ಟಿ, ಇತರರಿದ್ದರು. ಪ್ರಸನ್ನ ಪಂಡರಿ ಸ್ವಾಗತಿಸಿದರು. ಗಣೇಶ ಧೋಂಗಡಿ ನಿರೂಪಿಸಿದರು. ವಿನಾಯಕ ಮಿರಜಕರ ವಂದಿಸಿದರು.