ಕುಶಾಲನಗರ:
ರಾಮಾಯಣದಲ್ಲಿ ಬರುವ ಆದರ್ಶಗಳನ್ನು ಜೀವನದಲ್ಲೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರದ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿAದ ಇಲ್ಲಿನ ವಾಲ್ಮೀಕಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ವಾಲ್ಮೀಕಿ ಅವರು ದೈವ ಸಮಾನವಾಗಿದ್ದು, ಅವರು ಅದ್ಭುತ ಗ್ರಂಥವಾದ ರಾಮಾಯಣ ಬರೆದಿದ್ದಾರೆ. ಅದು ಎಂದಿಗೂ ಈ ಮಾನವ ಜೀವನದಲ್ಲಿ ಶಾಶ್ವತವಾಗಿರುತ್ತದೆ. ರಾಮಾಯಣ ಗ್ರಂಥವನ್ನು ಎಲ್ಲರೂ ಓದಬೇಕು ಎಂದರು.
ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಪುರಸಭೆ ಅಧಕ್ಷೆ ಜಯಲಕ್ಷಿö್ಮÃ, ಉಪಾಧ್ಯಕ್ಷೆ ಪುಟ್ಟಲಕ್ಷಿö್ಮÃ, ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತಿತರರು ಇದ್ದರು.