ಜಿಲ್ಲೆ

ವಾಲ್ಮೀಕಿ ಜಯಂತಿ ಬಹಿಷ್ಕಾರ ನಿರ್ಧಾರ ವಾಪಸ್

ವಿವೇಕಾನಂದ ದಾಸನಕೊಪ್ಪ

ಹಿರೇಕೆರೂರ: ಪಟ್ಟಣದಲ್ಲಿ ಅ. 17ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಬಹಿಷ್ಕರಿಸಿದ್ದನ್ನು ವಾಪಸ್ ಪಡೆಯಲಾಗಿದೆ ಎಂದು ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋವಿಂದಪ್ಪ ತಳವಾರ ತಿಳಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ ವಾಲ್ಮೀಕಿ ಜನಾಂಗದ ಕಾರ್ಯಗಳಿಗೆ ಬಳಸಲು ಮೀಸಲಿರಿಸಿದ್ದ 187 ಕೋಟಿ ರೂಪಾಯಿ ದುರ್ಬಳಕೆ ಆಗಿರುವುದು, ಸಮಾಜದ ಹಿತವನ್ನು ಕಡೆಗಣನೆ, ವಿವಿಧ ಇಲಾಖೆಗಳ ಆರ್ಥಿಕ ಸೌಲಭ್ಯಗಳು ಮೂಲಕ ಸಮಾಜದವರಿಗೆ ದೊರೆಯದಿರಿಂದ ಅ. 17 ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ಬಹಿಷ್ಕರಿಸಲು ನಿರ್ಧರಿದ್ದೇವು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಮ್ಮ ಸಮಾಜದ ರಾಜ್ಯ, ಜಿಲ್ಲೆಯ, ತಾಲೂಕುಗಳ ಎಲ್ಲ ಪದಾಧಿಕಾರಿಗಳು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಗಮನ ಸೆಳೆಯಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 187 ಕೋಟಿ ರೂ. ಜತೆಗೆ, ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವ ಜತೆಗೆ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ, ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸದಿರಲು ತೀಮಾನಿಸಿದ ನಿರ್ಧಾರ ವಾಪಸ್ ಪಡೆದಿದ್ದೇವೆ. ಜಯಂತಿಯಲ್ಲಿ ಸಂತೋಷವಾಗಿ ಭಾಗವಹಿಸುತ್ತೇವೆ ಎಂದರು.

ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ, ಕೆ.ಡಿ. ದಿವಿಗೀಹಳ್ಳಿ, ಹುಚ್ಚಪ್ಪ ಗೊಣೇರ, ಆರ್.ಎಫ್. ಹುಲ್ಲತ್ತಿ, ಎಲ್.ಬಿ. ನಾಯ್ಕರ, ವಿ.ಎಚ್. ಮಾಸೂರ, ಜಿ.ಎಚ್. ಅಗಸಿಬಾಗಿಲ, ರಮೇಶ ಮಾಳಮ್ಮನವರ, ಮಂಜುನಾಥ ಶಿವನಕ್ಕನವರ, ಮಂಜು ದೊಡ್ಡತಳವಾರ, ಆಂಜನೆಯ ಗುತ್ತಲ, ಪ್ರವೀಣ ತಳವಾರ, ಮಲ್ಲೇಶ ತಳವಾರ, ಬಿ.ಬಿ.ಯಲ್ಲಕ್ಕನವರ, ಮಹೇಶ ದೊಡ್ಮನಿ, ಗದಿಗೆಪ್ಪ ಮಾರವಳ್ಳಿ, ದುರ್ಗಪ್ಪ ತಳವಾರ, ಶಿವಾನಂದ ಹಾಲಸಬಾಳ ಹಾಗೂ ವಾಲ್ಮೀಕಿ ಸಮಾಜದವರು ಇದ್ದರು.