ಜಿಲ್ಲೆ

ಮೈಸೂರು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ವಾಲ್ಮೀಕಿ ಭಾವಚಿತ್ರಕ್ಕೆ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ವಾಲ್ಮೀಕಿಯವರ ರಾಮಾಯಣ ಕೃತಿಯು ಅಂದಿನ ಕಾಲದಲ್ಲೇ ವೈಜ್ಞಾನಿಕ ಪ್ರಬುದ್ಧತೆ ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ. ಪುಷ್ಪಕ ವಿಮಾನದ ತಂತ್ರಜ್ಞಾನ ಅಂದೇ ಇದ್ದುದನ್ನು ವಾಲ್ಮೀಕಿ ದಾಖಲಿಸುತ್ತಾರೆ. ಯುವ ಜನಾಂಗ ಇಂದು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ಓದಬೇಕು ಎಂದರು.

ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ವಾಲ್ಮೀಕಿ ಜಗದ ಕವಿ. ಅವರ ರಾಮಾಯಣ ಕಾವ್ಯದ ಸೇತುವೆ ಕಟ್ಟಿದ ಘಟನೆ ಎಐನಿಂದ ಸಾಬೀತು ಪಡಿಸಲು ಶೋಧನೆ ನಡೆಯುತ್ತಿದೆ. ಸದಾ ಚರ್ಚೆಗೆ ಒಳಗಾಗಿರುವ ಕೃತಿ ರಾಮಾಯಣ ಎಂದರು. ಈ ಸಂದರ್ಭ ಪ್ರಾಧ್ಯಾಪಕಿ ಪ್ರೊ.ಎನ್.ಕೆ. ಲೋಲಾಕ್ಷಿ ಹಾಗೂ ಇದ್ದರು.