ಮೂಲ್ಕಿ: ಜನಜೀವನಕ್ಕೆ ಆದರ್ಶ ಬೋಧಿಸುವ ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಯುವ ಜನತೆ ತಿಳಿದುಕೊಳ್ಳುವುದು ಬಹಳ ಅಗತ್ಯ ಎಂದು ಮೂಲ್ಕಿ ತಾಲೂಕು ಉಪತಹಸೀಲ್ದಾರ್ ದಿಲೀಪ್ ರೋಡ್ಕರ್ ಹೇಳಿದರು.
ಮೂಲ್ಕಿ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತಿ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕೋಟಿ ಭಕ್ತರ ಆರಾಧ್ಯ ದೇವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚರಿತ್ರೆ ಬರೆದ ಮಹಾನ್ ಮಹರ್ಷಿ ವಾಲ್ಮೀಕಿ ಅವರ ಬೋಧನೆಗಳು ಭಾರತೀಯ ಸಂಸ್ಕೃತಿ ಮೇಲೆ ಅಗಾಧ ಪ್ರಭಾವ ಬೀರಿದೆ. ಮಹರ್ಷಿ ವಾಲ್ಮೀಕಿ ಅವರ ಆದರ್ಶ ಜೀವನ ಚರಿತ್ರೆ ಯುವ ಜನಾಂಗಕ್ಕೆ ಕಾಲಕಾಲಕ್ಕೂ ಪ್ರಸ್ತುತ ಎಂದರು.
ಉಪತಹಸೀಲ್ದಾರ್ ವಿಲ್ಮಾ ರಸ್ಕಿನ, ಕಂದಾಯ ಇಲಾಖೆ ಅಧಿಕಾರಿ ಮೋಹನ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.