ಸಿರಿಗೇರಿ: ಸ್ಥಳೀಯ ವಾಲ್ಮೀಕಿ ಭವನದಲ್ಲಿ ಗ್ರಾಮಾಡಳಿತ ಕಚೇರಿ ಮತ್ತು ಆಧಾರ್ ಸೇವಾ ಕೇಂದ್ರವನ್ನು ಬುಧವಾರ ಆರಂಭಿಸಲಾಗಿದೆ.
ಈ ಮೊದಲು ಗ್ರಾಮಾಡಳಿತ ಕಚೇರಿ ಹಾಗೂ ಆಧಾರ್ ಸೇವಾ ಕೇಂದ್ರ ಶಿಥಿಲಗೊಂಡಿದ್ದ ನಾಡಕಚೇರಿಯಲ್ಲಿದ್ದವು. ಇದರಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ವಿವಿಧ ದಾಖಲಾತಿ ಪಡೆಯಲು ಜೀವಭಯದಲ್ಲಿ ಕಚೇರಿಗೆ ಕಾಲಿಡುವಂತಾಗಿತ್ತು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ಏ.2 ರಂದು ‘ಗ್ರಾಮ ಆಡಳಿತಾಧಿಕಾರಿ ಕಚೇರಿ ಕಟ್ಟಡ ಶಿಥಿಲ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.