ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ವಾಲ್ಮೀಕಿ ನಾಯಕರ ಸಂಘದ ನಾಮಫಲಕವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಉದಯ್ ಶಂಕರ್, ಪ್ರಭಾಕರ್, ಕಂಠಿಕುಮಾರ್, ಚಂದು, ಸಂತೋಷ್, ವಾಸಿಂ ಇದ್ದರು. 
ಜಿಲ್ಲೆ

ವಾಲ್ಮೀಕಿ ಭವನಕ್ಕೆ ಜಾಗ ಗುರುತು

ಸಾಲಿಗ್ರಾಮ: ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ತಾಲೂಕು ವಾಲ್ಮೀಕಿ ಸಮುದಾಯ ಭವನಕ್ಕೆ ಜಾಗ ಗುರುತು ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಸಾಲಿಗ್ರಾಮ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಸಂಘದ ನಾಮಫಲಕ ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದು, ಸಮಾಜದ ಜನರು ಅದನ್ನು ಸದುಪಯೋಗಪಡಿಸಿಕೊಂಡು. ಆರ್ಥಿಕ ಅಭಿವೃದ್ಧಿ ಹೊಂದಬೇಕು. ತಾಲೂಕು ನಾಯಕರ ಸಂಘ ಮಾಡುತ್ತಿರುವ ಸಮಾಜ ಸೇವೆಗೆ ನಾನು ಕೂಡ ಅವರೊಂದಿಗೆ ನಿಂತು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಈಗಾಗಲೇ ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ವಾಲ್ಮೀಕಿ ಭವನಗಳನ್ನು ಮಂಜೂರು ಮಾಡಿಸಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿವೆ. ಪ್ರಮುಖವಾಗಿ ತಾಲೂಕು ಮಟ್ಟದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕಾಗಿದೆ. ಸಮಾಜದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ನಿಂತು ಸಹಕರಿಬೇಕು. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಅಲ್ಲದೆ ಸಾಲಿಗ್ರಾಮ ಪಟ್ಟಣದಲ್ಲಿ ನಾಯಕ ಸಮಾಜದ ಕಟ್ಟಡ ದುರಸ್ತಿಯಲ್ಲಿದ್ದು ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ್ದೇನೆ. ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಅವರು ಕೂಡ ಭರವಸೆ ನೀಡಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ನಗರ ಅಧ್ಯಕ್ಷ ಪ್ರಭಾಕರ್, ಎಸ್ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಚಂದು, ಸಿಡಿಸಿ ಸದಸ್ಯ ಸಂತೋಷ್, ರಕ್ಷಾ ಸಮಿತಿ ಸದಸ್ಯ ವಾಸಿಂ, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಸೌಕತ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಚಿಕ್ಕಭೇರ್ಯ ಮಹದೇವ್, ಉಪಾಧ್ಯಕ್ಷ ವೆಂಕಟೇಶ ನಾಯಕ ಖಜಾಂಚಿ ಸಂತೋಷ್, ಗೋಬಿ ಶಂಕರ ನಾಯಕ, ಬೈರೇಶ್, ದೇವರಾಜ್, ಕೃಷ್ಣನಾಯಕ, ಮಹದೇವ್, ಸ್ವಾಮಿನಾಯಕ, ಕಲಾವಿದ ಕುಮಾರ್, ಮಿರ್ಲೆ ವೆಂಕಟೇಶ ನಾಯಕ, ಮಲ್ಲಿಕಾರ್ಜುನ್, ತಿಮ್ಮ ನಾಯಕ, ಲೋಕೇಶ್ ನಾಯಕ, ರಾಮನಾಯಕ, ಚಂದ್ರನಾಯಕ, ಕುಬೇರ ನಾಯಕ ಇತರರು ಇದ್ದರು.