ಜಿಲ್ಲೆ

ನಾಯಕರ ಸಮುದಾಯ ಭವನದ ಚಾವಡಿ ಉದ್ಘಾಟನೆ

ಎ. ಆರ್. ರಘುರಾಮ

ಮೂಗೂರು : ಗುರು ಹಿರಿಯರ ಮಾರ್ಗದರ್ಶನದಲ್ಲಿ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ತಾಪಂ ಮಾಜಿ ಸದಸ್ಯ ಎಂ. ಪಿ. ಚಂದ್ರಶೇಖರ ಹೇಳಿದರು.

ಗ್ರಾಮದ ಪಡುವಲ ನಾಯಕರ ಬಡಾವಣೆಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭ ನಾಯಕರ ಸಮುದಾಯ ಭವನದ ಚಾವಡಿ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾ ಕಾವ್ಯ ರಚಿಸುವ ಮೂಲಕ ವಿಶ್ವ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯಲು ಇವರ ಗ್ರಂಥ

ಮಾರ್ಗದರ್ಶಿಯಾಗಿದೆ. ದಿನವೂ ರಾಮಾಯಣದ ಸಂದೇಶದ ಅಡಿಯಲ್ಲೇ ಜೀವನ ನಡೆಸಬೇಕು ಎಂದರು. ಮಿತಿ ಮೀರಿದ ಉತ್ಸಾಹದಲ್ಲಿರುವ ಯುವಜನರು ಹಲವು ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಸಂದರ್ಭ ದಿಕ್ಕು ತಪ್ಪುತ್ತಿದ್ದಾರೆ. ಬದಲಾದ ಜೀವನ ಶೈಲಿಯಿಂದ ಬದುಕಿನಲ್ಲಿ ತತ್ವ, ಸಿದ್ಧಾಂತ, ಮೌಲ್ಯಗಳು ದೂರವಾಗುತ್ತಿವೆ. ಈ ಸಂದರ್ಭ ರಾಮಾಯಣ ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷ ಎಂ. ಡಿ. ಲೋಕೇಶ್, ಉಪಾಧ್ಯಕ್ಷೆ ಭಾಗ್ಯಾ, ಸದಸ್ಯರಾದ ಗೌರೀಶ್ ಮನು, ಮೋಹನ್ ಕುಮಾರ್ (ಶಿವು ), ಮಹೇಶ್, ಚೇತನ್, ಶಿವಣ್ಣ, ಪುಟ್ಟ ಮಾದಯ್ಯ, ಮುಖಂಡರಾದ ಎಂ. ಬಿ. ಮಹೇಂದ್ರ ಕುಮಾರ್, ಎಂ. ಆರ್. ಶಿವಮೂರ್ತಿ, ಸುಂದರ್, ಎಂ ಎಂ. ಜಯಣ್ಣ, ಮರಿಸ್ವಾಮಿ, ಸಿದ್ದರಾಜು, ದೇವಾನಂದ, ಸಿದ್ದರಾಜು, ನಾಗರಾಜು, ಉಪನ್ಯಾಸಕ ಕುಮಾರಸ್ವಾಮಿ ಇತರರು ಇದ್ದರು.