ಜಿಲ್ಲೆ

ವಾಲ್ಮೀಕಿ ಜಯಂತಿ ಆಚರಣೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ದಿನದ ಮಹತ್ವದ ಕುರಿತು ಮಾತನಾಡಿದ ಭಾಸ್ಕರ ನಾಯಕ್, ವಾಲ್ಮೀಕಿ ಮರ‍್ಷಿ ರಚಿಸಿದ ರಾಮಾಯಣ ಗ್ರಂಥ ಜಗತ್ತಿನ ಶ್ರೇಷ್ಠ 10 ಧರ‍್ಮಿಕ ಗ್ರಂಥಗಳಲ್ಲಿ ಅತ್ಯಂತ ಮೇಲ್ಪಂತಿಯಾಗಿರುವಂಥದ್ದು.

ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಅಂದರೆ ಪರಿರ‍್ತನೆ, ವಾಲ್ಮೀಕಿಯ ರಾಮಾಯಣದಲ್ಲಿ ತಂದೆ ಮಗ ಹೇಗಿರಬೇಕು ಎಂಬುದನ್ನು ದಶರಥ-ರಾಮನಿಂದ ತೋರಿಸಿದ್ದಾರೆ, ಅಣ್ಣ ತಮ್ಮಂದಿರು ಹೇಗಿರಬೇಕೆಂದು ರಾಮ- ಲಕ್ಷ್ಮಣರಿಂದ ತೋರಿಸಿದ್ದಾರೆ, ದಂಪತಿಗಳು ಹೇಗಿರಬೇಕೆಂದು ರಾಮ-ಸೀತೆಯಿಂದ ತೋರಿಸಿದ್ದಾರೆ ಎಂದರು. ಈ ಸಂರ‍್ಭ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಪಂಚಾಯಿತಿ ಸಿಬ್ಬಂದಿ ಇದ್ದರು.