ಹುಬ್ಬಳ್ಳಿ: ಇಲ್ಲಿಯ ತುಮಕೂರ ಓಣಿ ಸಿದ್ದವೀರಪ್ಪನಪೇಟೆಯಲ್ಲಿ ವಿಎಕೆ ಫೌಂಡೇಷನ್ ಪ್ರಾಯೋಜಕತ್ವ ಹಾಗೂ ಪಂಚ ಟ್ರಸ್ಟ್ ಕಮಿಟಿ ನೇತೃತ್ವ ಮತ್ತು ಶ್ರೀದುರ್ಗಾ ಯುವಕ ಮಂಡಳ, ಶ್ರೀಗಜಾನನ ಉತ್ತವ ಸಮಿತಿ ಸಂಯುಕ್ತ ಆಶ್ರಯದಲ್ಲಿ ದಸರಾ ಪ್ರಯುಕ್ತ ಎರಡು ದಿನ ದಾಂಡಿಯಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಸಾವಿರಾರು ಜನರು ದಾಂಡಿಯಾದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀದುರ್ಗಾ ಯುವಕ ಮಂಡಳದ ಗೌರವ ಅಧ್ಯಕ್ಷ ಗೋಪಾಲ ಅರಸಿದ ಹಾಗೂ ಸದಸ್ಯರು ಕಾರ್ಯಕ್ರಮ ಪ್ರಾಯೋಜಕರಾದ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ಅವರನ್ನು ಸನ್ಮಾನಿಸಿದರು.
ಯುವಕ ಮಂಡಳದ ಅಧ್ಯಕ್ಷ ದೀಪಕ ಜಿತೂರಿ, ಗಜಾನನ ಉತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಇರಕಲ್, ದುರ್ಗಾ ಮಹಿಳಾ ಮಂಡಳದ ಅಧ್ಯಕ್ಷೆ ಲಕ್ಷ್ಮೀಬಾಯಿ ಇರಕಲ್ ಉಪಸ್ಥಿತರಿದ್ದರು.
ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಠ್ಠಲ ಬದ್ದಿ, ಎಂ.ಆರ್. ಸೋಳಂಕಿ, ಎನ್.ಎಲ್. ಸೋಳಂಕಿ, ಎಸ್.ಆರ್. ಸೋಳಂಕಿ, ಡಿ.ಕೆ. ಚವ್ಹಾಣ, ಶೇಷುಸಾ ಜಿತೂರಿ, ಪ್ರಕಾಶ ಖೋಡೆ, ಪಾಲಿಕೆ ಸದಸ್ಯೆ ಪ್ರೀತಿ ಲದವಾ, ಧುರೀಣರಾದ ವಿನಾಯಕ ಲದವಾ, ಪ್ರಕಾಶ ಬುರಬುರೆ, ವೀರು ಕಠಾರೆ, ಸುಭಾಸ ಭಾಂಡಗೆ, ಇತರರರು ಪಾಲ್ಗೊಂಡಿದ್ದರು.
ಶ್ರೀನಾಥ ಪವಾರ ಸ್ವಾಗತಿಸಿದರು. ಕಿಟ್ಟು ಲದವಾ ವಂದಿಸಿದರು.