ಜಿಲ್ಲೆ

ವಜ್ರಸಿರಿ ರಂಗೋತ್ಸವ 31ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಭಿನಯ ಭಾರತಿಯ ವಾರ್ಷಿಕೋತ್ಸವ ನಿಮಿತ್ತ ಹಾಗೂ ದಿ. ನ. ವಜ್ರಕುಮಾರ ಸ್ಮರಣಾರ್ಥ ಆ. 31ರಿಂದ ಸೆ. 2ರವರೆಗೆ "ವಜ್ರಸಿರಿ ರಂಗೋತ್ಸವ-2024'ವನ್ನು ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 31ರಂದು ಸಂಜೆ 6 ಗಂಟೆಗೆ ಶ್ರೀಪತಿ ಮಂಜನಬೈಲು ನಿರ್ದೇಶನದ "ನಾ ತುಕಾರಾಂ ಅಲ್ಲಾ' ನಾಟಕವನ್ನು ಅಭಿನಯ ಭಾರತಿ ತಂಡ ಪ್ರಸ್ತುತಪಡಿಸಲಿದೆ. ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಸೆ. 2ರಂದು ಸಂಜೆ 6 ಗಂಟೆಗೆ ಡಾ. ಶ್ರೀಪಾದ ಭಟ್​ ನಿರ್ದೇಶನದ ಕಣಿವೆ ಹಾಡು ನಾಟಕವನ್ನು ನಟನ ಪಯಣ ರೆಪರ್ಟರಿ ತಂಡ ಪ್ರಸ್ತುತಪಡಿಸಲಿದ್ದು, ಚಲನಚಿತ್ರ ನಟ ಮಂಡ್ಯ ರಮೇಶ ಚಾಲನೆ ನೀಡುವರು. ಸೆ. 2ರಂದು ಸಂಜೆ 6 ಗಂಟೆಗೆ ಬಾಸಿಂಗಬಲ ನಾಟಕವನ್ನು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಪ್ರಸ್ತುತಪಡಿಸಲಿದೆ. ಮಹೇಶ ಹಿರೇಮಠ ಹಾಗೂ ಡಾ. ವೀರಣ್ಣ ಹವಾಲ್ದಾರ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಇದಲ್ಲದೆ ಸೆ. 4, 5ರಂದು ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ. 4ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದ ರಂಗಭೂಮಿ ಆ ದಿನಗಳು ಕುರಿತು ಫೇಸ್​ಬುಕ್​ ಲೈವ್​ನಲ್ಲಿ ಹಿರಿಯ ರಂಗ ತಜ್ಞ ಹರ್ಷ ಡಂಬಳ ಸಂದರ್ಶನ ಇರಲಿದ್ದು, ಅರವಿಂದ ಕುಲಕರ್ಣಿ ನಿರ್ವಹಿಸಲಿದ್ದಾರೆ. ಸೆ. 5ರಂದು ಸಂಜೆ 5.30ಕ್ಕೆ ಅಕ್ಕಮಹಾದೇವಿ ಆಲೂರು ಅವರಿಂದ ಭಾವಗೀತೆ ಗಾಯನ ನಡೆಯಲಿದೆ ಎಂದರು.