ಜಿಲ್ಲೆ

ದೇಶದ ಅಭಿವೃದ್ಧಿ ಚಿಂತಕರು ವಾಜಪೇಯಿ

ಮರಿದೇವ ಹೂಗಾರ

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನವನ್ನು ತಾಲೂಕಿನ ನೂಲ್ವಿ ಗ್ರಾಮದಲ್ಲಿ ಬುಧವಾರ ಆಚರಿಸಲಾಯಿತು.

ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ದೇಶಾದ್ಯಂತ ವಾಜಪೇಯಿ ಅವರ ಬಗ್ಗೆ ಅಭಿಮಾನ, ಗೌರವವಿದೆ. ಅಜಾತಶತೃ ಆಗಿರುವ ಅವರ ದೇಶದ ಅಭಿವೃದ್ಧಿ ಚಿಂತಕರೂ ಹೌದು. ಅವರು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಗರಿಗೆದರಿದವು ಎಂದರು.

ಬಿಜೆಪಿ ಮಂಡಲ ಅದ್ಯಕ್ಷ ಷಣ್ಮುಖ ಐಹೊಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಹಿರಿಯರಾದ ಮುತ್ತನಗೌಡ ಪಾಟೀಲ, ಮಲ್ಲನಗೌಡ ಹುತ್ತನಗೌಡ್ರ, ಗದಿಗೆಪ್ಪ ಜಿಡ್ಡಿ, ಶಂಕರಗೌಡ ಕಲ್ಲನಗೌಡ್ರ, ಚಂದ್ರಗೌಡ ಪಾಟೀಲ, ದ್ಯಾಮನಗೌಡ ಕಲ್ಲನಗೌಡ್ರ, ಉಡಚಪ್ಪ ಜಿಡ್ಡಿ, ದ್ಯಾಮನ್ನ ಬಡಿಗೇರ, ಉಮೇಶ ಕುಸುಗಲ್ಲ, ಲಿಂಗರಾಜ ಮೆಣಸಿನಕಾಯಿ, ಯಲ್ಲಮ್ಮ ಗಾಣಿಗೇರ, ಮಂಜುಳಾ ಮಟ್ಟಿ, ಮಹೇಶ ಮಣಕವಾಡ, ದೇವೇಂದ್ರ ಹುತ್ತನಗೌಡ್ರ, ಕೆಂಚಪ್ಪ ಶಿರೂರ, ಗುರು ಧರ್ಮಗೌಡ್ರ ಇತರರು ಉಪಸ್ಥಿತರಿದ್ದರು.