ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವಾಜಪೇಯಿ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಕೇವಲ ಎರಡು ಸ್ಥಾನ ಪಡೆದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಪಕ್ಷ ಸಂಘಟಿಸಿದ ಅವರ ಶಕ್ತಿ ಅಗಾಧ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಪ್ರಯುಕ್ತ ಮಂಗಳೂರು ಮಂಡಲ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿ ವಹಿಸಿ ಪ್ರಾಮಾಣಿಕ ಸೇವೆಗೈದ ಹಿರಿಯ ಕಾರ್ಯಕರ್ತರನ್ನು ಸ್ವಗೃಹದಲ್ಲಿ ಅಭಿನಂದಿಸಿ ಮಾತನಾಡಿದರು.
ಮಂಡಲ ಮಾಜಿ ಅಧ್ಯಕ್ಷ ಸೀತಾರಾಮ ಬಂಗೇರ, ಉಳ್ಳಾಲ ಭಾಗದಲ್ಲಿ ಪಕ್ಷ ಸಂಘಟಿಸಿದ ದಾಮೋದರ ಉಳ್ಳಾಲ ಅವರನ್ನು ಅಭಿನಂದಿಸಲಾಯಿತು. ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವತ್ತಬೈಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂಡಲ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಸುರೇಶ್ ದೇರಾಜೆ, ಹರೀಶ್ ಅಂಬ್ಲಮೊಗರು, ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೋಣಾಜೆ, ಉಪಾಧ್ಯಕ್ಷ ಸೂರಜ್ ಸಾಗರ್, ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ, ಸೋಮೇಶ್ವರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ್ ಬೀರಿ, ಉಳ್ಳಾಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಬಿ., ಸೋಮೇಶ್ವರ ಪುರಸಭಾ ಸದಸ್ಯ ಮೋಹನ್ ಶೆಟ್ಟಿ, ಹರೀಶ್ ಕುಂಪಲ, ಸ್ವಪ್ನಾ ಶೆಟ್ಟಿ, ಚೇತನ್ ಶೆಟ್ಟಿ, ದೀಕ್ಷಿತ್ ನಿಸರ್ಗ ಕುಂಪಲ ಮತ್ತಿತರರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಸ್ವಾಗತಿಸಿದರು. ಉಪಾಧ್ಯಕ್ಷ ಯಶವಂತ ದೇರಾಜೆ ವಂದಿಸಿದರು.
ಪಕ್ಷ ಇಂದು ಸದೃಢವಾಗಿ ಬೆಳೆದು ಅಧಿಕಾರದಲ್ಲಿರುವುದಕ್ಕೆ ಹಿರಿಯರ ತ್ಯಾಗ, ಪರಿಶ್ರಮ ಪ್ರಮುಖ ಕಾರಣ. ವಾಜಪೇಯಿ, ಅಡ್ವಾಣಿಯಂತಹ ಮೇರು ವ್ಯಕ್ತಿತ್ವದ ನಾಯಕರು ಮುನ್ನಡೆಸಿರುವ ಪಕ್ಷದಲ್ಲಿ ದುಡಿಯುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ https://www.vijayavani.net/kasaragod-railway-station https://www.vijayavani.net/manjeshwar-railway-station-development-is-almost-complete