ಮದ್ದೂರು: ತಾಲೂಕಿನ ಕದಲೀಪುರ ಗ್ರಾಮದ ಇತಿಹಾಸ ಪ್ರಸಿದ್ಧ ಕದಂಬ ಋಷಿಗಳು ತಪಸ್ಸು ಮಾಡಿ ಸ್ಥಾಪಿಸಿದ, ಪಶ್ಚಿಮಾಭಿಮುಖವಾಗಿ ನೆಲೆಗೊಂಡಿರುವ ಶ್ರೀ ಕದಲೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಜ.10ರಂದು ಶ್ರೀ ವೈಕುಂಠ ಏಕಾದಶಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಅಂದು ಪ್ರಾತಃಕಾಲ ಮಹಾಭಿಷೇಕ, ಮುಂಜಾನೆ 5.30 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಶ್ರೀ ವೈಕುಂಠದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ದೇಗುಲದ ಪ್ರಧಾನ ಅರ್ಚಕ ಕೆ.ನಾರಾಯಣ್ ಅಯ್ಯಂಗಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.