ತಾವರಗೇರಾದ ರಾಯನಕೆರೆ ಒಡ್ಡಿನಲ್ಲಿ ಬೋಂಗಾ ಬಿದ್ದು ವೈಜನಾಥ ದೇವಸ್ಥಾನ ಜಲಾವೃತ ಆಗಿರುವುದು. 
ಜಿಲ್ಲೆ

ವೈಜನಾಥ ದೇವಸ್ಥಾನ ಜಲಾವೃತ

ಗಾಯತ್ರಿ ಮಾಲಿಪಾಟೀಲ್

ತಾವರಗೇರಾ: ನಗರದ ಜೀವನಾಡಿ ರಾಯನಕೆರೆಯ ಒಡ್ಡಿನ ಬಳಿ ಮುಚ್ಚಿದ ಗೇಟ್‌ವಾಲ್‌ನಲ್ಲಿ ಬೊಂಗಾ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಶನಿವಾರ ಖಾಸ್‌ಬಾವಿ ಭರ್ತಿಯಾಗಿ ವೈಜನಾಥ ದೇವಸ್ಥಾನದ ಕಡೆ ಹರಿದಿದೆ. ಕೆಲವೇ ಗಂಟೆಗಳಲ್ಲಿ ವೈಜನಾಥ ಬಾವಿ ತುಂಬಿ, ದೇವಸ್ಥಾನ ಜಲಾವೃತವಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ವಹಣೆ ಮಾಡಲಾಗುತ್ತಿದ್ದು, ಒಡ್ಡು ದುರಸ್ತಿ ಮಾಡಲಾಗಿದ್ದರೂ ನೀರು ಪೋಲಾಗುತ್ತಿದೆ. ಪಕ್ಕದ ರಾಮದೇವರ ಗುಡಿ ಜಲಾವೃತ ಆಗುವ ಸಾಧ್ಯತೆ ಇದೆ.