ಕನಕಪುರ : ಮನುಕುಲದ ಒಳಿತಿಗಾಗಿ ವಚನಕಾರರು ನೀಡಿದ ಉದಾತ್ತ ಸಂದೇಶಗಳನ್ನು ವ್ಯಾಪಕವಾಗಿ ಮನಮುಟ್ಟಿಸಬೇಕಾದ ಅವಶ್ಯಕತೆ ಇದೆ ಎಂದು ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರೂ ಸೇರಿ ಎಲ್ಲ ವಚನಕಾರರು ಸಮಾಜದ ಉನ್ನತಿ ಬಯಸಿ ಜಾತಿ ವ್ಯವಸ್ಥೆ ಮೇಲು ಕೀಳು, ಭೇದಭಾವ ತೊರೆಯಬೇಕೆಂಬ ಸಂದೇಶವನ್ನು ತಮ್ಮ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಸಿದ್ದರಾಮೇಶ್ವರರು ವಚನಕಾರರಾಗಿ ಉಳಿಯದೇ ಸಮಾಜಮುಖಿ ಕಾಯಕವನ್ನು ಮಾಡಿದವರಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಯಲ್ಲೇಗೌಡ ಬೆಸಗರಹಳ್ಳಿ, ಲೇಖಕರ ವೇದಿಕೆ ಅಧ್ಯಕ್ಷ ಕೂಗಿ.ಗಿರಿಯಪ್ಪ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಪಿ.ಕಾಡೇಗೌಡ, ಸರ್ಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.