ಜಿಲ್ಲೆ

ಆ.5 ರಿಂದ ಒಂದು ತಿಂಗಳ ಪರ್ಯಂತ ವಚನ ಶ್ರಾವಣ ಕಾರ್ಯಕ್ರಮ

ಬೆಂಗಳೂರು: ಪ್ರತಿವರ್ಷದಂತೆ ವಚನಜ್ಯೋತಿ ಬಳಗವು ‘ವಚನ ಶ್ರಾವಣ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆ.5 ರಿಂದ ಸೆ.1ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಪಿನಾಕಪಾಣಿ ತಿಳಿಸಿದ್ದಾರೆ. ನಗರದ ವಿವಿಧ ಬಡಾವಣೆಗಳ ಆಸಕ್ತರ ಮನೆಯ ಅಂಗಳಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಲಿದೆ.

ವಚನ ಶ್ರಾವಣದಲ್ಲಿ ಸಾಮೂಹಿಕ ಪ್ರಾರ್ಥನೆ, ವಚನಗಳ ಗಾಯನ, ವ್ಯಾಖ್ಯಾನ, ವಿಶೇಷ ಆಹ್ವಾನಿತರ ಅನುಭಾವವು ಒಂದು ತಿಂಗಳ ಪರ್ಯಂತರ ಪ್ರತಿದಿನ ಒಂದೂವರೆ ಗಂಟೆಗಳ ಕಾಲ ನಡೆಯಲಿದೆ.

ತಮ್ಮ ಮನೆಯ ಅಂಗಳ ಅಥವಾ ಶಾಲಾ ಅಂಗಳದಲ್ಲಿ ವಚನ ಶ್ರಾವಣ ನಡೆಸಲು ಆಸಕ್ತಿ ಉಳ್ಳವರು ಹಾಗೂ ವಚನ ಶ್ರಾವಣದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ದೂ : 9845184267 ಸಂಖ್ಯೆಯನ್ನು ಸಂಪರ್ಕಿಸಬಹುದು.