ಬೆಳಗಾವಿ: ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯ ಉಳಿಸಿಕೊಂಡು ಕಾಪಾಡಿದ ಶರಣರು ಜಗತ್ತಿನ ವಿಶಿಷ್ಟ ಸಾಹಿತ್ಯ ಸಂರಸಿದ ಮೊದಲಿಗರು ಎಂದು ಜೆಎನ್ಎಂಸಿ ಕಾಲೇಜಿನ ಕಮ್ಯೂನಿಟಿ ಮೆಡಿಷನ್ ಸಹ ಪ್ರಾಧ್ಯಾಪಕ ಡಾ.ಅವಿನಾಶ ಕವಿ ಹೇಳಿದರು.
ನಗರದ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಈಚೆಗೆ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಕಲ್ಯಾಣ ಕ್ರಾಂತಿ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ಶರಣರು ರಚಿಸಿದ ವಚನಗಳು ಸಮಾಜದ ಪರಿವರ್ತನೆಗೆ ದಿವ್ಯಶಕ್ತಿಗಳಾಗಿದ್ದವು. ಅವುಗಳ ಸಂರಣೆ ಅಗತ್ಯವಾಗಿದೆ ಎಂದರು.
ವಚನ ಸಾಹಿತ್ಯ ಸಂರಸಿ ಮುಂದಿನ ಜನಾಂಗಕ್ಕೆ ಮುಟ್ಟಿಸುವ ಬಹುದೊಡ್ಡ ಕಾರ್ಯವನ್ನು ಶರಣರು ಮಾಡಿದ್ದಾರೆ. ಸಾಹಿತ್ಯದ ಸಂರಣೆಗೆ ಬದುಕನ್ನೇ ಮುಡಿಪಾಗಿಟ್ಟರು. ಅಂದು ಶರಣರು ಸಮಾಜದಲ್ಲಿ ವಿಚಾರಕ್ರಾಂತಿ ಮಾಡಿದ್ದರು ಎಂದರು.
ಮಹಾಸಭೆ ಅಧ್ಯೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಯುಗ ಯುಗಗಳು ಕಳೆದರೂ ಬಸವಾದಿ ಶರಣರ ಹೋರಾಟ ಜೀವನಕ್ಕೆ ದಿವ್ಯ ಸಂದೇಶ ನೀಡುತ್ತದೆ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ವಚನಗಳನ್ನು ಓದಿದರೆ ಸಾಲದು ಅವು ಬದುಕಿನ ಅನುಕರಣೆಯ ಮಾರ್ಗಗಳಾಗಬೇಕು. ಎಲ್ಲ ಧರ್ಮದವರಿಗೂ ಅವು ನುಡಿಮುತ್ತುಗಳಾಗಿವೆ ಎಂದರು.
ಡಾ.ಅವಿನಾಶ ಕವಿ ಹಾಗೂ ನೇತ್ರಾವತಿ ಕವಿ ಸಂಪಾದಿಸಿ ಸಂಯೋಜಿಸಿದ ಶರಣರತ್ನಮಾಲೆ ಎ ಟು ಜಡ್ ಮೂಲಾರಗಳ ಶರಣರ ಜೀವನ ಸಂದೇಶ ಹೊತ್ತ ಗ್ರಂಥದ ಐದನೇ ಮುದ್ರಣ ಬಿಡುಗಡೆಯಾಯಿತು. ನೀಲಗಂಗಾ ಚರಂತಿಮಠ, ಜ್ಯೋತಿ ಬಾದಾಮಿ, ಆಶಾ ಯಮಕನಮರಡಿ, ಮಹಾಂತೇಶ ಮೆಣಸಿನಕಾಯಿ, ಶಶಿಕಲಾ ನಾಡಗೌಡ, ಮಾಜಿ ಸಚಿವ ಶಶಿಕಾಂತ ನಾಯಕ, ಡಾ.ಎಚ್.ಬಿ. ರಾಜಶೇಖರ, ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣವರ, ಬಾಲಚಂದ್ರ ಬಾಗಿ ಇತರರಿದ್ದರು.