ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಶ್ರೀ ಬಸವ ಜಯಂತಿಯನ್ನು ಆಚರಿಸಲಾಯಿತು. ಟಿ.ಜಿ.ಸುರೇಸಾಚಾರ್, ಸಿ.ಎಂ.ಪ್ರಕಾಶ್, ಬಿ.ಎಂ.ಶಿವಮಲ್ಲಪ್ಪ, ಮಹದೇವಸ್ವಾಮಿ, ಕೆ.ಎನ್.ಅಶೋಕ, ಜಗದೀಶ ಧೂಳಶೆಟ್ಟಿ, ಬಿ.ಮರಯ್ಯ, ಕೆ.ಎನ್.ಪ್ರಭುಸ್ವಾಮಿ, ಕುಮಾರಸ್ವಾಮಿ, ಸುಗಂಧರಾಜು, ಸಿದ್ದಲಿಂಗಸ್ವಾಮಿ ಇತರರು ಇದ್ದರು. 
ಜಿಲ್ಲೆ

ಜಗತ್ತಿನ ಸಾಹಿತ್ಯ ಕ್ಷೇತ್ರಕ್ಕೆ ವಚನಗಳು ಬಳುವಳಿ

ತಿ.ನರಸೀಪುರ: ಜಗತ್ತಿನ ಸಾಹಿತ್ಯ ಕ್ಷೇತ್ರಕ್ಕೆ ವಚನಗಳನ್ನು ಬಳುವಳಿಯಾಗಿ ಕೊಟ್ಟ ಕೀರ್ತಿ ನಾಡಿನ ಬಸವಾದಿ ಶರಣ ಪರಂಪರೆಯ ವಚನಕಾರರಿಗೆ ಸಲ್ಲಬೇಕು ಎಂದು ಮುಖ್ಯಶಿಕ್ಷಕ ಸೋನಹಳ್ಳಿ ಸಿದ್ದರಾಜಪ್ಪ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಜಗತ್ತಿನ ನಾನಾ ದೇಶಗಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ಕೊಟ್ಟಿರುವಂತೆ ನಾಡಿನ ಶರಣರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ವಚನ ಸಾಹಿತ್ಯವನ್ನು ಬಳುವಳಿಯಾಗಿ ನೀಡಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಚಳವಳಿಗೆ ಮುನ್ನುಡಿ ಹಾಕಿದರು. ಪ್ರಜಾಪ್ರಭುತ್ವಕ್ಕೆ ಬುನಾದಿಯಾಗಿ ಅನುಭವ ಮಂಟಪ ಸ್ಥಾಪಿಸಿದ್ದರು. ಗೌತಮ ಬುದ್ಧ ಹಾಗೂ ಅಂಬೇಡ್ಕರ್ ಅವರು ಕೂಡ ಪ್ರಗತಿಪರ ಚಿಂತನೆ ಹಾಗೂ ವಿಚಾರಗಳ ಮೂಲಕ ದೇಶದ ಹಿರಿಮೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ತಾಲೂಕು ಕಚೇರಿ ಆವರಣ ಅಥವಾ ಪ್ರಮುಖ ವೃತ್ತದಲ್ಲಿ ಶ್ರೀ ಬಸವ ಪುತ್ಥಳಿ ಸ್ಥಾಪಿಸುವಂತೆ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್ ಅವರು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿದರು.

ಮಹಾಸಭಾ ಉಪಾಧ್ಯಕ್ಷರಾದ ಬಿ.ಎಂ.ಶಿವಮಲ್ಲಪ್ಪ, ಎಸ್.ಕೆ.ಕಿರಣ, ಅಂಬಿಕಾ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಕಾರ್ಯದರ್ಶಿಗಳಾದ ಮಲ್ಲಪ್ಪ, ಪರಮೇಶ್ ಪಟೇಲ್, ಅಶ್ವಿನಿ ಮಲ್ಲಪ್ಪ, ಕೋಶಾಧ್ಯಕ್ಷ ನಂಜುಂಡಸ್ವಾಮಿ, ಯುವ ಅಧ್ಯಕ್ಷ ಕೆ.ಎನ್.ಅಶೋಕ್, ಮಹಿಳಾ ಅಧ್ಯಕ್ಷೆ ರೂಪಶ್ರೀ ಪರಮೇಶ್, ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಸುಗಂಧರಾಜು, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ನಿರ್ದೇಶಕರಾದ ಓಂಕಾರ ಸ್ವಾಮಿ, ಗುರುಸ್ವಾಮಿ, ಕೆ.ಎಂ ಮಲ್ಲು, ತೊಂಟೇಶ್, ಸುರೇಶ್, ರಾಜಮಣಿ, ಸುಧಾ, ಜ್ಞಾನೇಶ್ವರಿ, ಸವಿತಾ, ಮಾಯಪ್ಪ, ಶ್ರೀ ಶಿವಕುಮಾರ ಸ್ವಾಮಿಗಳ ಸೇವಾ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ, ಬಿಜೆಪಿ ಕ್ಷೇತ್ರಧ್ಯಕ್ಷ ಶಿವಕುಮಾರ್, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಸಿಡಿಪಿಓ ಗೋವಿಂದರಾಜು, ಪಿಎಸ್‌ಐ ಜಗದೀಶ ಧೂಳ್‌ಶೆಟ್ಟಿ, ಸೆಸ್ಕ್ ಎಇಇ ಕೆ.ವಿ.ವೀರೇಶ್, ತಾ.ಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಮುಖಂಡರಾದ ಆಲಗೂಡು ಶಿವಕುಮಾರ್, ಕೆ.ಎನ್.ಪ್ರಭುಸ್ವಾಮಿ, ಬನ್ನಹಳ್ಳಿ ಸೋಮಣ್ಣ, ಸೋಸಲೆ ರಾಜಶೇಖರಮೂರ್ತಿ, ಸಿ.ಪುಟ್ಟಮಲ್ಲಯ್ಯ, ಬಿ.ಮನ್ಸೂರ್ ಆಲಿ, ಮೂಗೂರು ಸಿದ್ದರಾಜು, ಸಿ.ಪುಟ್ಟಯ್ಯ, ಆಡಿಟರ್ ಮಂಜುನಾಥ್ ಇತರರು ಇದ್ದರು.