ಗಂಗಾವತಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಕಂಚಿನ ಮೂರ್ತಿ ಮೆರವಣಗೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಜಿ.ವೀರಪ್ಪ, ಮುಖಂಡರಾದ ಕೆ.ಕಾಳಪ್ಪ ಇತರರಿದ್ದರು.  
ಜಿಲ್ಲೆ

ಬಸವೇಶ್ವರ ಕಂಚಿನ ಮೂರ್ತಿ ಮೆರವಣಿಗೆ ಅದ್ದೂರಿ

ಗಂಗಾವತಿ: ಸರ್ವ ಸಮುದಾಯದ ನೆರವಿನೊಂದಿಗೆ ಹೊಸದಾಗಿ ತಯಾರಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಕಂಚಿನ ಮೂರ್ತಿ ಮೆರವಣಗೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ಜಗಜ್ಯೋತಿ ಬಸವೇಶ್ವರ ಟ್ರಸ್ಟ್‌ನಿಂದ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ನಗರದ ಸಿಬಿಎಸ್ ಗಂಜ್ ಆವರಣದ ಶ್ರೀ ಚನ್ನಬಸವ ಸ್ವಾಮಿ ದೇವಾಲಯದಿಂದ ಶ್ರೀಕೃಷ್ಣ ದೇವರಾಯ ವೃತ್ತದ ಬಳಿಯ ನೆಹರು ಪಾರ್ಕ್‌ವರೆಗೆ ಮೆರವಣಿಗೆ ಮಾಡಲಾಯಿತು. 108 ಮಹಿಳೆಯರು ವಚನಗ್ರಂಥಗಳನ್ನು ಹೊತ್ತು ಪಾಲ್ಗೊಂಡಿದ್ದರು. ನಂದಿಕೋಲು ಕುಣಿತ, ಡೊಳ್ಳು, ತಾಷೆ ಮೇಳ ಸೇರಿ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದವು.

ಬಸವೇಶ್ವರ ಅನುಭವ ಮಂಟಪದಲ್ಲಿ ಉನ್ನತ ಸ್ಥಾನ ಪಡೆದಿದ್ದ ವಿವಿಧ ಸಮುದಾಯದ ದಾರ್ಶನಿಕರ ಭಾವಚಿತ್ರಗಳ ಮೆರವಣಿಗೆ ಮೆರುಗು ತಂದಿತು. ಬಸವ ಕೇಂದ್ರ, ರಾಷ್ಟ್ರೀಯ ಬಸವ ದಳ ಹಾಗೂ ಬಸವಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ವಿಪ್ರ ಹಾಗೂ ಜೈನ ಸಮುದಾಯದರು ಮಜ್ಣಿಗೆ ಮತ್ತು ತಂಪುಪಾನೀಯ ವಿತರಿಸಿದರು.

ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಹುದಿನದ ಕನಸು ನನಸಾಗುತ್ತಿದ್ದು, ಎಲ್ಲ ಸಮುದಾಯದವರ ನೇತೃತ್ವದಲ್ಲಿ ನೆರವೇರುತ್ತಿರುವುದು ವಿಶೇಷ ಎಂದರು.

ಮಾಜಿ ಶಾಸಕ ಜಿ.ವೀರಪ್ಪ, ಮುಖಂಡರಾದ ಸಿಂಗನಾಳ ಸುರೇಶ, ಬಸವರಾಜ ಸ್ವಾಮಿ ಮಳೀಮಠ, ಕೆ.ಕಾಳಪ್ಪ, ಟ್ರಸ್ಟ್ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಉಪಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಕಾರ್ಯದರ್ಶಿ ರಾಚಪ್ಪ ಸಿದ್ದಾಪುರ, ಪದಾಧಿಕಾರಿಗಳಾದ ಎ.ಕೆ.ಮಹೇಶಕುಮಾರ, ಮಂಜುನಾಥ ಮಸ್ಕಿ, ನವೀನ್ ಮಾಲಿ ಪಾಟೀಲ್, ಉಮೇಶ ಎಸ್.ಸಿಂಗನಾಳ್, ಸಂಗಮೇಶ ಮಹಾದೇವಪ್ಪ ಕೋಟಿ, ಆನಂದ್ರ ಕೊಟ್ರಪ್ಪ ಅಕ್ಕಿ, ಚೇತನಕುಮಾರ ಹೊಸ್ಕೇರಿ, ಹಿರಿಯ ಮುಖಂಡರಾದ ಹೊಸಳ್ಳಿ ಶಂಕರಗೌಡ, ಸರಿಗಮ ಹನುಮಂತಪ್ಪ, ಕೆ.ಬಸವರಾಜ, ದಿಲೀಪ್ ವಂದಾಲ್, ಸಂಗಮೇಶ ಕೋಟಿ, ಶಿವಪ್ಪ ಯಲಬುರ್ಗಿ, ಮನೋಹರಗೌಡ ಹೇರೂರು, ರಾಜೇಶರೆಡ್ಡಿ ಇತರರಿದ್ದರು.