ವಿಜಯಪುರದ ಕಸಾಪ ಸಭಾಭವನದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸವನ್ನು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಉದ್ಘಾಟಿಸಿದರು. ಪ್ರಾಚಾರ್ಯ ಡಿ.ಎಂ. ಚಲವಾದಿ, ಗಿರಿಜಾ ಪಾಟೀಲ, ಶಾಂತಾ ಚೌರಿ( ಬಿರಾದಾರ) ಮತ್ತಿತರರಿದ್ದಾರೆ. 
ಜಿಲ್ಲೆ

ವಚನ ಸಾಹಿತ್ಯ ವಿಶ್ವಕ್ಕೆಲ್ಲ ಅನುಕರಣೀಯ

ವಿಜಯಪುರ: ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಹಾಗೂ ಅವರ ಜೀವನ ಚರಿತ್ರೆ ವಿಶ್ವಕ್ಕೆಲ್ಲ ಅನುಕರಣೀಯ ಎಂದು ಟಕ್ಕಳಕಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಡಿ.ಎಂ. ಚಲವಾದಿ ಹೇಳಿದರು.

ನಗರದ ಜಿಲ್ಲಾ ಕಸಾಪ ಸಭಾ ಭವನದಲ್ಲಿ ದಿ. ಗಂಗಾಧರ ಕೋರಳ್ಳಿ ಹಾಗೂ ದಿ. ಶಿವಪ್ಪ ಮಲ್ಲಪ್ಪ ಅವರಾದಿ ಸ್ಮರಣಾರ್ಥ ಶುಕ್ರವಾರ ಕಸಾಪದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ವಚನ ಸಾಹಿತ್ಯ ಒಂದು ಚಳವಳಿಯಾಯಿತು. ಸಮ ಸಮಾಜದ ನಿರ್ಮಾಣದ ಕನಸು ಹೊತ್ತ ಶರಣ ಕಾರ್ಯ ಮನೆಮಾತಾಯಿತು. ಶರಣರ ಸಾಮಾಜಿಕ ಮೌಲ್ಯಗಳು ವಿಶ್ವಕ್ಕೆ ಮಾದರಿಯಾದವು ಎಂದರು.

ಹಿರಿಯ ಸಾಹಿತಿ ಗಿರಿಜಾ ಪಾಟೀಲ ಮಾತನಾಡಿ, ಸದ್ಗುಣ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ತಿಳಿವಳಿಕೆ ಹೊಂದಿದ್ದ ನೀಲಾಂಬಿಕೆಯನ್ನು ಮದುವೆಗಾಗಿದ್ದು ಬಸವಣ್ಣನವರ ಆದರ್ಶಕ್ಕೆ ಮತ್ತಷ್ಟು ಮೆರಗು ನೀಡಿತು. ಬಸವಣ್ಣನವರು ನೀಲಾಂಬಿಕೆಯನ್ನು ಪುಣ್ಯವಂತೆ ಎಂದು ಬಣ್ಣಿಸಿದ್ದಾರೆ. ಗಂಗಾಂಬಿಕೆಯನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದ ಬಸವಣ್ಣನವರು ಎಂದಿಗೂ ಲೌಕಿಕ ಬದುಕಿಗೆ ಆದ್ಯತೆ ನೀಡಿದವರಲ್ಲ. ಸಂಸಾರದರಲ್ಲಿದ್ದುಕೊಂಡೇ ಅಲೌಕಿಕ ಸಾಧನೆ ಮಾಡಿದವರು ಬಸವಣ್ಣನವರೆಂದು ತಿಳಿಸಿದರು.

ಸಾಹಿತಿ ಶಾಂತಾ ಚೌರಿ (ಬಿರಾದಾರ) ವಚನ ಸಾಹಿತ್ಯ ಕುರಿತು ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಉದ್ಘಾಟಿಸಿದರು. ಬಸವರಾಜ ಸೋಮಪೂರ, ರಾಜೇಸಾಬ ಶಿವನಗುತ್ತಿ, ಯಮನಪ್ಪ ಮಿಣಜಗಿ, ಬಸವರಾಜ ಮೇಟಿ, ಸೋಮಲಿಂಗ ಹೊಸಮನಿ, ಎ.ಆರ್. ಅತ್ತಾರ, ಬಿ.ಬಿ. ಲಾಳಸಂಗಿ, ಪಿ.ಎ. ರಜಪೂತ, ಶಂಕರ ಬ್ಯಾಕೊಡ, ಎಸ್.ಕೆ. ಯಳಮೇಲಿ, ವಿನೋದಾ ಹಿರೇಮಠ, ಅಕ್ಕಮಹಾದೇವಿಯ ಅಮರಣ್ಣವರ, ಸುರೇಖಾ ಚಲವಾದಿ, ಭಾಗ್ಯ ಕೆಂಗನಾಳ, ಕಿಶೋರ ಬಜಂತ್ರಿ, ಎಸ್.ಎಸ್. ವಾಲಿಕಾರ, ಎ.ಎ. ಶೇಖ ಮತ್ತಿತರರಿದ್ದರು.

ನಾಗವೇಣಿ ನಂದ್ಯಾಳ ಪ್ರಾರ್ಥಿಸಿದರು. ದಿವ್ಯಾ ಚವಾಣ್ ನಿರೂಪಿಸಿದರು. ಪುಷ್ಪಾ ಬಿರಲದಿನ್ನಿ ವಂದಿಸಿದರು.