ಜಿಲ್ಲೆ

ಚೌಕಟ್ಟು ಬಿಟ್ಟು ವಚನ ಚರ್ಚೆ ಮಾಡಲಿ : ಬಿ.ಎಲ್.ಸಂತೋಷ ಆಶಯ

ಕಲಬುರಗಿಯಲ್ಲಿ ವಚನ ದರ್ಶನ ಬಿಡುಗಡೆ | ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಚನಗಳ ಚೌಕಟ್ಟು ವಿಶಾಲವಾಗಿದೆ. ಸಾಧಕರ ವಿಚಾರಗಳನ್ನು ಚೌಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ವಿಚಾರಗಳನ್ನು ಒಪ್ಪದಿರಲು ಸ್ವಾತಂತ್ರÈವಿದೆ. ಆದರೆ ಒಳ್ಳೆಯ ಚರ್ಚೆ ನಡೆಯಬೇಕು. ಸರ್ವಾಧಿಕಾರ ಸರಿಯಲ್ಲ ಎಂದು ಹೇಳುವವರು ಚೌಕಟ್ಟಿನಿಂದ ಹೊರಬಂದು ಮಾತನಾಡಲಿ ಎಂದು ಬಿಜೆಪಿ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ `ವಚನ ದರ್ಶನ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಚಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ಇತರ ಹಳಿಯಬೇಡ ಎಂದು ಶರಣರು ಹೇಳಿದ್ದಾರೆ ಎಂದರು.
ಸಾಲ ಮಾಡಿ ತುಪ್ಪ ತಿನ್ನು ಎಂದAಥ ಚಾರ್ವಾಕ ಋಷಿಗಳಂಥವರು ನಮ್ಮಲ್ಲಿದ್ದಾರೆ. ಭಾರತದಂಥ ದೊಡ್ಡ ಸಮಾಜದಲ್ಲಿ ಎಲ್ಲರೂ ಇರುತ್ತಾರೆ. ವಿರೋಧ ಸಹಜ. ಆದರೆ ವಿವಾದಕ್ಕೆ ಅಂಜಿ ಚರ್ಚೆ ನಿಲ್ಲಬಾರದು. ಅನುಭವ ಮಂಟಪದಲ್ಲಿ ಹಿಂದು ಸಮಾಜದ ಎಲ್ಲ ಜಾತಿಯವರಿದ್ದರು. ಭಕ್ತಿ, ಕಾಯಕ, ದಾಸೋಹದ ಅನುಭವದಿಂದ ಶರಣರು ಹೊರಹೊಮ್ಮಿದರು ಎಂದು ಹೇಳಿದರು.
ಅನುಭವ ಮಂಟಪಕ್ಕೆ ದೇಶದ ಎಲ್ಲೆಡೆಯಿಂದ ಭಕ್ತರು, ಕುತೂಹಲಿಗಳು ಬಂದರು. ಅವರು ಚರ್ಚಿಸುತ್ತ, ಅನುಭವವನ್ನು ಹೇಳುತ್ತ ಶರಣರಾದರು. ಬಂದವರೆಲ್ಲರಿಗೂ ಮೂಲ ಇದ್ದಿದ್ದು ಭಕ್ತಿ. ಭಕ್ತಿಯು ಮುಕ್ತಿಯ ಜನನಿ ಎಂದು ಶರಣರು ಹೇಳಿದರೆ, ಅದನ್ನೇ ದಾಸರು ಲಯಬದ್ಧವಾಗಿ ಹೇಳಿದ್ದರು ಎಂದು ಸ್ಮರಿಸಿದರು.
ಕಾಯಕ ಸಂಸ್ಕೃತಿಯಲ್ಲಿ ಸಂಕೋಚ, ಮೇಲು-ಕೀಳು ಇರಲಿಲ್ಲ. ಲೋಕ ಕಲ್ಯಾಣದ ಹಂಗು ಇರಲಿಲ್ಲ. ಕಾಯಕಕ್ಕೆ ಆತ್ಮ ಉದ್ಧಾರ, ಅಂತಃಕರಣ ಶುದ್ಧಿ ತೋರಿಸಿದ್ದರು. ಶಬ್ದಗಳ ಡಂಬಾಚಾರದಿAದ ಬೆಳೆಯಲಿಲ್ಲ. ದಾಸೋಹ ಸಂಸ್ಕೃತಿ ಕಷ್ಟಕಾಲದಲ್ಲಿದ್ದವರನ್ನು ಉಳಿಸುತ್ತಿದೆ. ಶರಣರು ಅನುಭಾವದ ನೆಲೆಯ ಕಡೆ ಸಾಗಿದರು. ನನಗೆ ಇದಿದ್ದರಲ್ಲಿಯೇ ಹಂಚಿ ತಿನ್ನುವುದು ಅಧ್ಯಾತ್ಮ. ಅದನ್ನು ಸಾಧಿಸಿ, ಸಮರಸ ಸಮಾಜ ನಿರ್ಮಿಸಲು ಶ್ರಮಿಸಿದ್ದು ಶರಣರು ಎಂದರು.
ಗದಗ ಬ್ರಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ವಚನಗಳಲ್ಲಿ ವೈಚಾರಿಕ, ಬಂಡಾಯ ಪದಗಳು ಇಲ್ಲ. ಅಂಗೈಯಲ್ಲಿನ ಲಿಂಗ ಅರಿವಿನ ಕುರುಹು ಆಗಿದೆ. ಬೇರೆ, ಬೇರೆ ಆರಾಧನೆ ಪದ್ಧಗಳಿವೆ. ನಮಗೆ ಬಸವಣ್ಣ ಎದೆ ಮೇಲೆ ಲಿಂಗ ನೀಡಿದ್ದಾರೆ. ಸರಳವಾಗಿ ಪೂಜೆ, ಅರ್ಚನೆ ಮಾಡಬಹುದು. ಆದರೆ ಪ್ರಸ್ತುತ ಇಷ್ಠಲಿಂಗದ ವ್ಯಾಕ್ಯಾನ ಬದಲಾಗಿವೆ. ಅದ್ಭುತವಾದ ಸಾಹಿತ್ಯ ಶರಧಿ ವಚನ ಸಾಹಿತ್ಯ. ಅದನ್ನು ಹೇಗಿದೆಯೋ ಹಾಗೆಯೇ ಓದಬೇಕು ಎಂದು ಹೇಳಿದರು.
ಬಸವರಾಜ ಡೊಣ್ಣೂರ ಪ್ರಾಸ್ತಾವಿಕ ಮಾತನಾಡಿ, ಸೀಮಿತ ದೃಷ್ಟಿಕೋನದಿಂದ ವಚನಗಳ ವಿಶ್ವಾಸಾತ್ಮಕತೆಗೆ ಧಕ್ಕೆ ತರಲಾಗಿದೆ. ಚೌಕಟ್ಟಿನಲ್ಲಿಡುವ ಕೆಲಸ ಬೇಡ. ಮಾರ್ಕ್ಸ್ವಾದಿ ನೆಲೆಯಿಂದ ಓದಿ ಶರಣರ ಮೂಲವಾದ ಭಕ್ತಿ ಕಡೆಗಣಿಸಲಾಗಿದೆ. ವಚನ ಸಾಹಿತ್ಯಕ್ಕೂ ಮೂಲವಿದೆ. ಸೈದ್ಧಾಂತಿಕ, ವೈಚಾರಿಕ ಭಿನ್ನತೆ ಮೀರಿ ದೇಶ ಕಟ್ಟಬೇಕಿದೆ. ದೇಶಕ್ಕೆ ಬಾಹ್ಯದ ಜತೆಗೆ ಆಂತರಿಕ ವಿರೋಧವಿದೆ. ಕಾಯಕದಲ್ಲಿ ಪ್ರತಿರೋಧಗಳ ಸಹಜ. ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ದೇಶ, ನಾಡು ಕಟ್ಟಬೇಕಿದೆ ಎಂದು ಹೇಳಿದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಪ್ರಜ್ಞಾ ಪ್ರವಾಹ ಜಿಲ್ಲಾ ಸಂಯೋಜಕ ಸತ್ಯಜೀತ ಕಿತ್ತೂರ, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಪ್ರಾಂತ ಕಾರ್ಯದರ್ಶಿ ಶಿವಶರಣ ಕೊಟ್ರಾಳ, ಪ್ರಮುಖರಾದ ವಿಜಯ ಮಹಾಂತೇಶ, ಅನೀಲ ತಂಬಾಕೆ, ಶಿವರಾಜ ಸಂಗೋಳಗಿ, ಈರಣ್ಣ ಗುಳೇದ್, ಡಾ.ಅರವಿಂದ ಮೋಳ್ದಿ,ಪ್ರಲ್ಹಾದ್ ಭಟ್ ಪೂಜಾರಿ, ಸತೀಶ ಮಾಹೂರ, ಪ್ರಶಾಂತ ಗುಡ್ಡಾ, ದತ್ತಾತ್ರೇಯ ಪಾಟೀಲ್ ರೇವೂರ, ಅರವಿಂದ ನವಲಿ, ಭರತ್ ಖಮಿತಕರ, ಬಸವರಾಜ ಬೆಣ್ಣೂರ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಸೂರ್ಯಕಾಂತ ಡೋಣಿ, ಮಹಾಂತೇಶ ಬಿರಾದಾರ, ನಾಗೇಂದ್ರ ಕಬಾಡೆ, ಮುಂಜುನಾಥ ಕಳಸಕರ, ಬಸವರಾಜ ಮುನ್ನೋಳ್ಳಿ, ಸದಾನಂದ ಪೆರ್ಲ, ರಮೇಶ ತಿಪನೂರ, ಹರ್ಷಾನಂದ ಗುತ್ತೇದಾರ, ಶಿವಕಾಂತ ಮಹಾಜನ, ಸಿz್ದÁಜಿ ಪಾಟೀಲ್, ಮುರಳಿ ಪೂಜಾರ, ಸುಶಾಂತ ದೇಶಮುಖ, ಸಂತೋಷ ಹಾದಿಮನಿ, ಶ್ರೀನಿವಾಸ ದೇಸಾಯಿ, ರಾಮು ರೆಡ್ಡಿ ಇತರರಿದ್ದರು.