ಜಿಲ್ಲೆ

ವಚನಕಾರರೂ ಸಾಮಾಜಿಕ ಬಂಡಾಯಗಾರರಾಗಿದ್ದರು

ಎ. ಆರ್. ರಘುರಾಮ

ಹುಣಸೂರು : ಹನ್ನೆರಡನೇ ಶತಮಾನದ ವಚನಕಾರರು ನಿಜವಾದ ಅರ್ಥದಲ್ಲಿ ಸಾಮಾಜಿಕ ಬಂಡಾಯಗಾರರಾಗಿದ್ದರು ಎಂದು ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಚಂದ್ರಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಗಾವಡಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯಪರಿಷತ್ ವತಿಯಿಂದ ಆಯೋಜಿಸಿದ್ದ ಶರಣರ ವೈಚಾರಿಕತೆ ವಿದ್ಯಾರ್ಥಿಗಳೆಡೆಗೆ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯದಲ್ಲಿ ಅಂಬಿಗರ ಚೌಡಯ್ಯ’ ವಿಷಯದ ಕುರಿತು ಮಾತನಾಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ನಾಡಿನ ಬಹುತೇಕ ಸಾಮಾಜಿಕ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರಗಳಿವೆ. ಅಚ್ಚರಿಯ ಸಂಗತಿಯೆಂದರೆ ಭಾರತ ಸಂವಿಧಾನದಲ್ಲಿಯೂ ಶರಣರ ವಚನಗಳ ನೆರಳು ದಟ್ಟವಾಗಿದೆ. ಧರ್ಮ ಮತ್ತು ಜಾತಿಯ ಹೆಸರಲ್ಲಿ ಹರಿದು ಹಂಚಿಹೋಗಿದ್ದ ಭಾರತೀಯ ಸಮಾಜದಲ್ಲಿ ಶರಣರು ತಂದ ಸುಧಾರಣೆಗಳು ಕ್ರಾಂತಿಕಾರಕ ವಾಗಿದ್ದವು ಎಂದರು. ಗಾವಡಗೆರೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಚಂದ್ರು, ಪ್ರಾಂಶುಪಾಲ ಜನಾರ್ಧನ್ ಮಾತನಾಡಿದರು. ಪರಿಷತ್ ಕಾರ್ಯದರ್ಶಿ ರೇಣುಕಾಪ್ರಸಾದ್, ಖಜಾಂಚಿ ಕುಮಾರ್ ಹೊನ್ನೇನಹಳ್ಳಿ, ಉಪನ್ಯಾಸಕರಾದ